ಹಾವೇರಿ: ಲೇವಾದೇವಿಗಾರರು, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳು ಪರವಾನಗಿ ಪಡೆದ ಪ್ರತಿ ಐದು ವರ್ಷಕ್ಕೆ ನವೀಕರಣಗೊಳಿಸುವುದು ಕಡ್ಡಾಯವಾಗಿದೆ. ಜಿಲ್ಲೆಯ 27 ಸಂಸ್ಥೆಗಳು 31 ಮಾರ್ಚ್ 2024ರೊಳಗಾಗಿ ನವೀಕರಿಸದ ಕಾರಣ ಈ ಸಂಸ್ಥೆಗಳ ಭದ್ರತಾ ಠೇವಣಿಯನ್ನು ಸರ್ಕಾರಕ್ಕೆ ಮುಟ್ಟಗೋಲು ಹಾಕಿಕೊಂಡು ಅವರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಈ ವಿಷಯವನ್ನು ಸಂಬಂಧಪಟ್ಟ ಸಂಸ್ಥೆಗಳ ಮಾಲೀಕರ ಗಮನಕ್ಕೆ ತರಲಾಗಿದ್ದು, ಸಂಸ್ಥೆಯವರು ತಮ್ಮ ಆಕ್ಷೇಪಣೆ ಏನಾದರೂ ಇದ್ದಲ್ಲಿ 15 ದಿನದೊಳಗಾಗಿ ಸಲ್ಲಿಸಬೇಕು. ಇದಕ್ಕೆ ತಪ್ಪಿದಲ್ಲಿ ನವೀಕರಣಗೊಳ್ಳದ ಸಂಸ್ಥೆಗಳನ್ನು ರದ್ದುಪಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಲೇವಾದೇವಿಗಾರರ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಹಾವೇರಿ ಈ ವಿಳಾಸದಲ್ಲಿ ಸಂಪರ್ಕಿಸಲು ಕೋರಲಾಗಿದೆ.