ಹಾವೇರಿ: ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಜು.2ರಂದು ಹಾವೇರಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಭಾರತಿ ನಗರ, ದೇವಿಹೊಸೂರ ಹಾಗೂ ಕುರುಬಗೊಂಡ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಮದ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹಾವೇರಿ ನಗರ ವ್ಯಾಪ್ತಿಯ ಹಾನಗಲ್ಲ ರೋಡ್, ಅಶ್ವಿನಿ ನಗರ ನೀರಿನ ಟ್ಯಾಂಕ್, ಜಿಲ್ಲಾ ಕೋರ್ಟ್ ವಸತಿ ಗೃಹಗಳು, ಶಿವಾಜಿನಗರ 1 ಮತ್ತು 2ನೇ ಕ್ರಾಸ್, ಭಾರತಿ ನಗರ, ದಾನೇಶ್ವರಿ ಪಾರ್ಕ್, ಶ್ರೀಕಂಠಪ್ಪ ಬಡಾವಣೆ, ಗ್ರಾಮೀಣ ಪೊಲೀಸ್ ಠಾಣೆ, ವಿದ್ಯಾನಗರ ಪಶ್ಚಿಮ ಭಾಗ, ಮಿಡ್‌ಮ್ಯಾಕ್ ಲೇಔಟ್, ವೈಭವ ಲಕ್ಮೀ ಪಾರ್ಕ್, ಸಾಯಿ ಅಕ್ಷಯ ಪಾರ್ಕ್, ಪಟ್ಟದಸ್ವಾಮಿ ಲೇಔಟ್, ತುಳಸಿ ಐಕಾನ್, ಮುದಗಲ್ ಲೇಔಟ್, ಅಗ್ನಿಶಾಮಕ ಠಾಣೆ, ಎಲ್‌ಐಸಿ ಹಿಂಭಾಗದಲ್ಲಿ ಕರೆಂಟ್ ಇರಲ್ಲ.
ದೇವಿಹೊಸೂರ, ದಿಡಗೂರ, ಹಿರೇಲಿಂಗದಹಳ್ಳಿ, ಹೊಂಬರಡಿ, ಹೊಸಳ್ಳಿ, ಕಬ್ಬೂರ, ಕಲ್ಲಾಪುರ, ಕನಕಾಪುರ, ಕೆರೆಮತ್ತಿಹಳ್ಳಿ, ಸಂಗೂರ, ತೋಟದಯಲ್ಲಾಪುರ, ವೀರಾಪುರ, ವೆಂಕಟಾಪೂರ, ಗೌರಾಪುರ, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪೂರ, ಕುಳೇನೂರ, ಕಲ್ಲಾಪುರ, ಹೊಸೂರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ ಗ್ರಾಮಗಳಲ್ಲಿ ಈ ಫೀಡರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.