ಹಾವೇರಿ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂಗವಾಗಿ ಶುಕ್ರವಾರ ಸವಣೂರ ತಾಲೂಕಿನ ವಿವಿಧ ಗ್ಯಾರೇಜ್, ಅಂಗಡಿಗಳಲ್ಲಿ ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ಕಾರ್ಯ ನಡೆಸಿ, ಓರ್ವ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಿ ಪಾಲಕರ ವಶಕ್ಕೆ ನೀಡಲಾಗಿದೆ.
ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು.
ಸವಣೂರ ವೃತ್ತ ಕಾರ್ಮಿಕ ನಿರೀಕ್ಷಕ ಮಹಾಂತೇಶ ಹಿರೇಮಠ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ, ಬಿ.ಸಿ.ಎಂ. ಇಲಾಖೆ ನವೀನ ಕೋರಿ, ಪುರಸಭೆಯ ಎಸ್.ಎಚ್.ಪೂಜಾರ, ಪೊಲೀಸ್ ಇಲಾಖೆಯ ಡಿ.ಎನ್.ಹೂವಣ್ಣನವರ, ಶಿಕ್ಷಣ ಇಲಾಖೆಯ ವಿ.ಬಿ.ಕಳಸದ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ಪ್ರವೀಣ ಗೊಡ್ಡೆಮ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಿರಣ ಬುಳ್ಳಾಪುರ, ಇತರರು ಹಾಜರಿದ್ದರು.