ಜಿಲ್ಲೆ

ಬೈಕ್ ಸವಾರನ ಮೇಲೆ ಟ್ರಕ್ ಹಾದು ಇಬ್ಬರು ಸಾವು; ಛತ್ರ ಗ್ರಾಮದ ದುರ್ಗಾ ಹೋಟೆಲ್ ಬಳಿ ಘಟನೆ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಹಾವೇರಿ: ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ದುರ್ಗಾ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಸರ್ವಿಸ್ ರಸ್ತೆಯಲ್ಲಿ ಬೈಕ್ ಸವಾರ ಲಾರಿ ಓವರ್ ಟೇಕ್ ಮಾಡುವಾಗ, ಹಿಂಬದಿಯಿಂದ ಇನ್ನೊಂದು ಲಾರಿ ಬಂದು ಬೈಕ್ ಗೆ ಗುದ್ದಿದೆ

ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಬಿದ್ದ ಇಬ್ಬರು ಬೈಕ್ ಸವಾರರು. ಬೈಕ್ ಸವಾರರ ಬಗ್ಗೆ ಲೆಕ್ಕಿಸದೆ ಲಾರಿ ಮೇಲೆ ಹತ್ತಿಸಿದ ಡ್ರೈವರ್ ಪರಾರಿಯಾಗಿದ್ದಾನೆ.

ಬೈಕ್ ಸವಾರರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ

ಮೃತರು ಶಿಗ್ಗಾಂವಿ ತಾಲೂಕಿನ ಚಾಕಾಪೂರ ಗ್ರಾಮದ ನಿಂಗಪ್ಪ (೪೦), ಶರೀಫ್ (45)

ಬ್ಯಾಡಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿ 

ಛತ್ರ ಗ್ರಾಮದ ಬಳಿ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ

ಅನೇಕ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ.

ಕಳೆದ ಮೂರು ವರ್ಷದಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆ

ಇದೇ ಸ್ಥಳದಲ್ಲಿ ಇದುವರೆಗೂ 9 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾತೆ. 11 ಕೇಸ್ ದಾಖಲಾಗಿವೆ.