ಜಿಲ್ಲೆ

ಗೃಹ ಸಚಿವರಿಂದ ಕೀಳು ಮಟ್ಟದ ಹೇಳಿಕೆ; ಚನ್ನಮ್ಮ ಬ್ಯಾಡಗಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಬಾತ್‌ರೂಮ್‌ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಸಣ್ಣ ವಿಷಯ’ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆ ಕೀಳು ಮಟ್ಟದ ಹೇಳಿಕೆ ಎಂದು ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಚನ್ನಮ್ಮ ಬ್ಯಾಡಗಿ ಆರೋಪಿಸಿದ್ದಾರೆ.
ಗೃಹ ಸಚಿವರಂಥ ಘನತೆಯ ಹುದ್ದೆಯಲ್ಲಿರುವವರಿಂದ ಈ ರೀತಿಯ ಹೇಳಿಕೆ ನಾಚಿಕೆಗೇಡುತನವಾಗಿದೆ. ಮಹಿಳೆಯರ ಬಗ್ಗೆ ಸಚಿವರಿಗೆ ಇರುವ ಗೌರವ ಎಂಥಹದ್ದು ಎಂಬುದು ಇದರಿಂದ ತಿಳಿಯುತ್ತದೆ. ಗೃಹ ಸಚಿವರು ಓಲೈಕೆ ರಾಜಕಾರಣವನ್ನು ಬೇರೆ ವಿಷಯಗಳಲ್ಲಿ ತೋರ್ಪಡಿಸಲಿ. ಬದಲಾಗಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ಅಲ್ಪಸಂಖ್ಯಾತರ ಓಲೈಕೆ ಬಿಟ್ಟು ಹಿಂದುಗಳನ್ನು ಸಮನಾಗಿ ಕಾಣುವ ಮೂಲಕ ಗೃಹ ಸಚಿವ ಹುದ್ದೆಯ ಗೌರವ ಎತ್ತಿ ಹಿಡಿಯಲಿ ಎಂದು ಚನ್ನಮ್ಮ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.