ಜಿಲ್ಲೆ

ಮತ್ತೆ ಸಿಎಂ ಪರ ಬ್ಯಾಟ್ ಬೀಸಿದ ಜಮೀರ್

ಹಾವೇರಿ: ಸಿಎಂ ಬದಲಾವಣೆ, 50; 50 ಶೇರಿಂಗ್ ಕುರಿತು ಯಾವುದೇ ಒಪ್ಪಂದವೂ ಆಗಿಲ್ಲ. ಈಗ ಸಿಎಂ ಕುರ್ಚಿ ಖಾಲಿ ಆಗಿಲ್ಲ. 2028ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಮತ್ತೊಮ್ಮೆ ಸಿಎಂ ಪರ ಬ್ಯಾಟ್ ಬೀಸಿದರು.

ಬ್ಯಾಡಗಿ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ನಮ್ಮ ಪಕ್ಷ ಗೆರೆ ಹಾಕಿದರೆ ದಾಟಲ್ಲ. ನನಗೆ ಡಿಸಿಎಂ ಹುದ್ದೆ ಕೊಡಬೇಕು ಎಂಬ ಆಸೆ ಹಲವರಿಗೆ ಇದೆ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಎರಡೂವರೆ ವರ್ಷ ಮಂತ್ರಿ ಆಗುವ ಅವಕಾಶ ಕೊಟ್ಟಿದೆ. ಬೇಡ ನೀನು ಪಕ್ಷದ ಕೆಲಸ ಮಾಡು ಎಂದರೆ ಅದಕ್ಕೂ ಸಿದ್ಧವಿದ್ದೇನೆ ಎಂದರು.

ಬಿದ್ದ ಮನೆಗಳಿಗೆ ಹಂತ ಹಂತವಾಗಿ ಪರಿಹಾರ

ಮಳೆಗೆ ಹಾನಿಗಿಡಾದ ಮನೆಗಳಿಗೆ ಪರಿಹಾರ ಕೊಡುತ್ತಿದ್ದೇವೆ. ಈಗ ಮೊದಲ ಹಂತದಲ್ಲಿ 140 ಕೋಟಿ ಹಣ ಬಡಿಉಡೆಗಯಾಗಿದೆ. ಹಂತ ಹಂತವಾಗಿ ಎಲ್ಲ ಹಣ ಬಿಡುಗಡೆ ಮಾಡಲಾಗುವುದು ಎಂದರು ಜಮೀರ್‌ಅಹ್ಮದ್.