ಹಾವೇರಿ: ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಬಿ.ಫಾರ್ಮ, ಕಾನೂನು ಪದವಿ ಹಾಗೂ ಮುಂತಾದ ಕೋರ್ಸುಗಳ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪಾಸ್ ಅವಧಿ ವಿಸ್ತರಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ತಿಳಿಸಿದೆ.
ಯಾವ ಕೋರ್ಸುಗಳಿಗೆ ಮತ್ತು ತರಗತಿಗಳು ಎಲ್ಲಿಯವರೆಗೆ ನಡೆಯುತ್ತವೆ ಎಂಬುದರ ಬಗ್ಗೆ ಸಂಬಂಧಿಸಿದ ಕಾಲೇಜುಗಳಿಂದ ದೃಢೀಕರಣ ಪತ್ರ ಪೂರೈಸಬೇಕು. ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸುಗಳನ್ನು ಒಂದು ಅಥವಾ ಪರೀಕ್ಷೆಗಳ ವೇಳಾಪಟ್ಟಿಗೆ ಅನುಗುಣವಾಗಿ ಮಾನ್ಯತಾ ಅವಧಿಯನ್ನು ಗರಿಷ್ಠ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗುವುದು.
ಪಾಸ್‌ಗಳ ವಿಸ್ತರಣೆಗಾಗಿ ಒಂದು ಅಥವಾ ಎರಡು ತಿಂಗಳ ಶುಲ್ಕವನ್ನು ಹಾಗೂ ಸಂಸ್ಕರಣ ಶುಲ್ಕವನ್ನು ಪಾವತಿಸಿಕೊಂಡು ರಸೀದಿಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ಪಾಸಿನ ಸಂ. ನಮೂದಿಸಿ ವಿಸ್ತರಿಸಲಾಗುವುದು. 2022-23ನೇ ಸಾಲಿನ ಬಸ್‌ಪಾಸ್ ಮತ್ತು ಶುಲ್ಕ ಪಾವತಿ ರಶೀದಿ ಎರಡನ್ನೂ ತೋರಿಸಿ ಪಾಸಿನಲ್ಲಿರುವ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.