ಹಾವೇರಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಿಸಲಾತಿ ರದ್ದುಗೊಳಿಸುವುದಾಗಿ ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಎಸ್‌ಸಿ, ಎಸ್‌ಟಿ ಮೋರ್ಚಾ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನ ಬದಲಾಯಿಸಲಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದರು. ಇಂದು ಅವರೇ ದಲಿತರ ಮೀಸಲಾತಿ ಕಿತ್ತುಕೊಳ್ಳುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಮುಖವಾಡ ಬಯಲು ಮಾಡಿದೆ. ಇಂತ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಇವರನ್ನು ಲೋಸಸಭಾ ಸದಸ್ಯತ್ವ ಸ್ಥಾನದಿಂದ ರದ್ದುಗೊಳಿಸಿ, ಭಾರತದಿಂದ ಹೊರಗೆ ಕಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ರಾಹುಲ್ ಗಾಂಧಿಗೆ ತಾಕತ್ ಇದ್ದರೆ ಮೀಸಲಾತಿ ರದ್ದುಗೊಳಸಲಿ ಎಂದು ಸವಾಲು ಹಾಕಿದರು.
ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಮೊದಲು ಬಂಧಿಸಭೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು. ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಈಗ ಅವರ ಸಂವಿಧಾನ ರಚನೆಯ ಮಿಸಲಾತಿಯನ್ನು ರಾಹುಲ್ ಗಾಂಧಿ ರದ್ದುಗೊಳಿಸಲು ಹೋರಟ್ಟಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಪ್ಪ ಹರಿಜನ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಸವರಾಜ ಚಳಗೇರಿ, ಪ್ರಮುಖರಾದ ಪರಮೇಶಪ್ಪ ಮೇಗಳಮನಿ, ರೇಖಾ ಕರಿಭೀಮಣ್ಣನವರ, ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೆರ, ನಂಜುಂಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಅಭಿಷೇಕ ಗುಡಗೂರ, ಬಿದ್ದಾಡೆಪ್ಪ ಮತ್ತೂರ, ಉಮೇಶ ಮಾಗಳ, ದುರ್ಗೇಶ ತಿಕರಪ್ಪನವರ, ದಾನಪ್ಪ ಲಮಾಣಿ, ಮಂಜು ವಡ್ಡರ, ಕರೆಯಪ್ಪ ಮುಂದಿನಮನಿ, ವಿನಯ ತಳಗೇರಿ, ಮಂಗಳಾ ಸೊಟ್ಟಣ್ಣನವರ, ಪರಮೇಶ ಲಮಾಣಿ, ಮಂಜುನಾಥ ಮಡಿವಾಳರ, ಇತರರಿದ್ದರು.