ಜಿಲ್ಲೆ

ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ 27ರಂದು

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜು.27ರಂದು ಬೆಳಗ್ಗೆ 11 ಗಂಟೆಗೆ ದೇಶಾದ್ಯಂತ ಸ್ಥಾಪಿಸಿರುವ ‘ಕಿಸಾನ್ ಸಮೃದ್ಧಿ ಕೇಂದ್ರ’ಗಳ ಉದ್ಘಾಟನೆಯನ್ನು ವರ್ಚುಯೆಲ್ ಕಾರ್ಯಕ್ರಮದ ಮೂಲಕ ಮಾಡಲಿದ್ದಾರೆ.
ಈ ಕಾರ್ಯಕ್ರಮದ ಮೂಲಕ ರೈತರಿಗೆ ಪ್ರತಿ ವರ್ಷ ನೀಡುವ 6 ಸಾವಿರ ರೂ. ನಗದನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ. ಈ ಹಿಂದೆ ವಾಜಪೇಯಿ ಅವರ ಸರ್ಕಾರ ಯೂರಿಯಾ ಗೊಬ್ಬರ ಕಳ್ಳ ಮಾರುಕಟ್ಟೆ ತಡೆದು ಬೇವು ಲೇಪಿತ ಯೂರಿಯಾವನ್ನು ಜಾರಿಗೊಳಿಸಿತ್ತು. ಇದೀಗ ಪ್ರಧಾನಿ ಮೋದಿಜಿಯವರು ರೈತರಿಗೆ ಬೇಕಾಗುವ ರಸಗೊಬ್ಬರ, ಬೀಜ ಹಾಗೂ ಇತರ ಪರಿಕರಗಳನ್ನು ಒಂದೇ ಕೇಂದ್ರದಲ್ಲಿ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈ ವರ್ಚುಯೆಲ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಪ್ರಕಟಣೆ ಮೂಲಕ ಕೋರಿದ್ದಾರೆ.