ಜಿಲ್ಲೆ

ಪ್ರಧಾನಿ ಮೋದಿ ಅವರಿಂದ ಸೈನಿಕರಲ್ಲಿ ಧೈರ್ಯ ಇಮ್ಮಡಿ; ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೈನಿಕ ಚಂದ್ರಶೇಖರ್ ಸೀಗೆಹಳ್ಳಿ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತೀಯ ಸೈನ್ಯದಲ್ಲಿ ಆತ್ಮಸ್ಥೈರ್ಯ ಇಮ್ಮಡಿಯಾಗಿದೆ. ಪ್ರಧಾನಿಯವರು ಸೈನಿಕರಿಗೆ ನೈತಿಕ ಬೆಂಬಲ ನೀಡುವ ಮೂಲಕ ವಿಶ್ವದ ಬಲಿಷ್ಠ ಸೈನ್ಯವನ್ನಾಗಿ ನಿರ್ಮಿಸಿದ್ದಾರೆ ಎಂದು ಮಾಜಿ ಸೈನಿಕ ಚಂದ್ರಶೇಖರ್ ಸೀಗೆಹಳ್ಳಿ ಹೇಳಿದರು.

ಇಲ್ಲಿನ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ 26ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧ ಭಾರತದ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತದೆ. ಮೋಸದಿಂದ ಪಾಕಿಸ್ತಾನದ ಸೈನಿಕರು ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಂಡಾಗ ಭಾರತೀಯ ಸೈನ್ಯ ಎದೆಗುಂದದೆ ಪಾಕಿಸ್ತಾನದ ಸೈನಿಕರನ್ನು ಎದುರಿಸಿ ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಂಡಿತು. ಅಲ್ಲದೇ ಪಾಕಿಸ್ತಾನ ಸೈನ್ಯದ ಕುತಂತ್ರ ಬುದ್ಧಿಯನ್ನು ಇಡೀ ವಿಶ್ವಕ್ಕೆ ತೋರ್ಪಡಿಸಿತು. ಭಾರತೀಯ ಸೈನ್ಯ ಯುದ್ಧದ ಸಂದರ್ಭದಲ್ಲಿ ಎಂದಿಗೂ ಅಳುಕಿಲ್ಲ. ಯಾವುದೇ ದೇಶವಿರಲಿ ಆ ದೇಶದ ವಿರುದ್ಧ ಧೈರ್ಯದಿಂದ ಹೋರಾಡಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಕ್ಷಪ್ಪ ಬಳ್ಳಾರಿ ಮಾತನಾಡಿ, ಕಾರ್ಗಿಲ್ ಯುದ್ದದ ವೇಳೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಸೈನ್ಯಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದರು. ಯುದ್ಧದಲ್ಲಿ 547 ಭಾರತೀಯ ಸೈನಿಕರು ದೇಶಕ್ಕಾಗಿ ಸಮರ್ಪಿಸಿಕೊಂಡರು. ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಬಲಿಷ್ಠವಾಗಿದೆ. ಹಾಗಾಗಿ, ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಬೇಕೆಂದರೆ ಸಾವಿರ ಬಾರಿ ಯೋಚಿಸುತ್ತವೆ ಎಂದರು.

ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಪಾಟೀಲ, ಎಸ್.ವಿ.ಕರಮಡಿ, ಶಿವಪುತ್ರಪ್ಪ ಕಡ್ಲಿ, ಪಿ.ಎಲ್.ರಣದೀವೆ, ಸಿ.ವಿ.ಗುಜರಿ, ಗಿರೀಶ ತುಪ್ಪದ, ಬಸವರಾಜ ಕಳಸೂರ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣಿ, ಪರಮೇಶಪ್ಪ ಮೇಗಳಮನಿ, ಕಿರಣ ಕೋಣನವರ, ಗುಡ್ಡಪ್ಪ ಬರಡಿ, ನಾಗೇಂದ್ರ ಕಟಕೋಳ, ಇತರರಿದ್ದರು.