ಜಿಲ್ಲೆ

ಬಿಜೆಪಿ ಹಾವೇರಿ ನಗರ ಮಂಡಲ ವತಿಯಿಂದ ಗ್ರಾಮ ಚಲೋ ಅಭಿಯಾನ

ಹಾವೇರಿ: ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಬಿಜೆಪಿ ನಗರ ಮಂಡಲ ವತಿಯಿಂದ ಪೂಜೆ ನೆರವೇರಿಸುವ ಮೂಲಕ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಗ್ರಾಮ ಚಲೋ ಅಭಿಯಾನದ ಜಿಲ್ಲಾ ಸಹ ಸಂಚಾಲಕ ನಿರಂಜನ ಹೇರೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಕಿರಣಕುಮಾರ ಕೋಣನವರ, ಸುರೇಶ ಹೊಸಮನಿ, ಜಗದೀಶ ಮಲಗೋಡ, ಜಗದೀಶ ಬಸೇಗೆಣ್ಣಿ, ಜಗದೀಶ ಕನವಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುನಾಥ ತಂಡೂರ, ಚನ್ನಮ್ಮ ಪಾಟೀಲ, ಪುಷ್ಪಾ ಚಕ್ರಸಾಲಿ, ರತ್ನಾ ಭಿಮಕ್ಕನವರ, ಚನ್ನಮ್ಮ ಪಾಟೀಲ, ಜ್ಯೋತಿ ಸಾತೆನಹಳ್ಳಿ, ಶಿವಲಿಂಗಪ್ಪ ಕಲ್ಯಾಣಿ, ಶಿವಬಸವ ಚೌಶೆಟ್ಟಿ, ಹೊನ್ನಪ್ಪ ಮಾಳಗಿ, ಇತರರಿದ್ದರು.