ಹಾವೇರಿ: ದೆಹಲಿಯ ವಾಟಿಕಾ ಉದ್ಯಾನವನ ನಿರ್ಮಿಸಲು ಸಂಗ್ರಹಿಸುತ್ತಿರುವ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮದ ಅಮೃತ ಕಲಶ ಯಾತ್ರೆಗೆ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಚಾಲನೆ ನೀಡಿದರು.
ಒಂದು ತಿಂಗಳಿನಿಂದ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಮಣ್ಣನ್ನು ಜಿಲ್ಲೆಯ ವಿವಿಧ ಮಂಡಲಗಳ ಕಾರ್ಯಕರ್ತರು ಭಕ್ತಿ ಮತ್ತು ಶ್ರದ್ದೆಯಿಂದ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಸಂಗ್ರಹಿಸಿದ್ದಾರೆ. ದೆಹಲಿಯ ವಾಟಿಕಾ ಉದ್ಯಾನವನ್ನು ನಿರ್ಮಿಸಲು ಈ ಮಣ್ಣನ್ನು ಕಳುಹಿಸಲಾಗುವುದು ಎಂದರು.
ದೆಹಲಿಯ ಕರ್ತವ್ಯ ಪಥದಲ್ಲಿ ಅ.31ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯಿಂದ 20 ಜನರ ತಂಡ ಅಮೃತ ಕಳಸವನ್ನು ತೆಗೆದುಕೊಂಡು ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಮಂಡಲಗಳ ಅಧ್ಯಕ್ಷರಾದ ಗಂಗಾಧರ ಬಾಣದ, ಹಾಲೇಶ ಜಾಧವ, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಪತ್ತಾರ, ಬಸವರಾಜ ಕೋಳಿವಾಡ, ರೇಣುಕಗೌಡ ಪಾಟೀಲ, ಚನ್ನಬಸಯ್ಯ ದುರ್ಗದಮಠ, ಶ್ರೀನಿವಾಸ ಗಿತ್ತೆ, ಸತೀಶ ತಿಮ್ಮಣ್ಣನವರ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಚಿನ್ನಿಕಟ್ಟಿ, ಅಮೋಘ ಬಾದಮಿ, ನಾಗರಾಜ ಬಣಕಾರ, ಅಣ್ಣಪ್ಪ ಹಳ್ಳಳ್ಳಿ, ಫಕ್ಕಿರಗೌಡ ಭರಮಗೌಡ್ರ, ಶಿವಬಸಪ್ಪ ಇಂಗಳಗಿ, ಇತರರಿದ್ದರು.