ಜಿಲ್ಲೆ

ಗಮನ ಬೇರೆಡೆ ಸೆಳೆದು 1.98 ಲಕ್ಷ ರೂ. ದೋಚಿದ ಖದೀಮರು

ಹಾವೇರಿ: ಬೈಕ್ ಸವಾರನ ಗಮನ ಬೇರೆಡೆ ಸೆಳೆದು 1.98 ಲಕ್ಷ ರೂ. ದೋಚಿದ ಘಟನೆ ಇಲ್ಲಿಯ ಕೆರಿಮತ್ತಿಹಳ್ಳಿ ರಸ್ತೆಯ ಬೇಕರಿಯೊಂದರ ಬಳಿ ಬುಧವಾರ ನಡೆದಿದೆ.
ಹಳೆರಿತ್ತಿ ಗ್ರಾಮದ ಚನ್ನಬಸಪ್ಪ ಚಂದ್ರಶೇಖರ ಅಂಗಡಿ (38) ಹಣ ಕಳೆದುಕೊಂಡವರು.
ಇವರು ಬ್ಯಾಂಕ್‌ನಿಂದ 1.98 ಲಕ್ಷ ರೂ. ಡ್ರಾ ಮಾಡಿಕೊಂಡು ಬಂದು ತಮ್ಮ ಬೈಕ್‌ನ ಟ್ಯಾಂಕ್ ಕವರ್‌ನಲ್ಲಿ ಇಟ್ಟಿಕೊಂಡು ಬೇಕರಿ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಖದೀಮರು ಬೈಕ್‌ನ ಎಕ್ಷಿಲೇಟರ್‌ಗೆ ಆಯಿಲ್ ಹಚ್ಚಿ ಬೈಕ್ ಸವಾರ ಕೈ ತೊಳೆದುಕೊಳ್ಳಲು ತೆರಳುವಂತೆ ಮಾಡಿದ್ದಾರೆ. ನಂತರ ಆತನ ಬೈಕ್‌ನಲ್ಲಿದ್ದ ಹಣದ ಬ್ಯಾಗ್ ದೋಚಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.