ಹಾವೇರಿ: ನಗರದ ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ದಿಲ್ಲಾ ಭಗವದ್ಗೀತಾ ಅಭಿಯಾನವನ್ನು ದತ್ತಾತ್ರೇಯ ಕಳ್ಳಿಹಾಳ ಉದ್ಘಾಟಿಸಿದರು.
ಅಭಿಯಾನದ ಹಾವೇರಿ ಜಿಲ್ಲಾ ಸಂಚಾಲಕ ಎಂ.ಕೆ.ಹೆಗಡೆ ಗೋಳಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತೆಯ ಮೂಲಕ ವ್ಯಕ್ತಿತ್ವ ನಿರ್ಮಾಣದ ಕಾರ್ಯ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಗುರುಗಳ ಆಶಯದಂತೆ ಕಾರ್ಯಕ್ರಮದಲ್ಲಿ ಭಗವದ್ಗೀತೆಯ 11ನೇ ಅಧ್ಯಾಯವನ್ನು ಪಠಣ ಮಾಡಲಾಯಿತು.
ಭಗವದ್ಗೀತಾ ಅಭಿಯಾನದ ಗೌರವ ಅಧ್ಯಕ್ಷ ಪ್ರಭಾಕರರಾವ್ ಮಂಗಳೂರು, ಬ್ಯಾಡಗಿಯ ಶ್ರೀನಿವಾಸ ಶಿವಪೂಜಿ, ಶ್ರೀರಾಮ ಮಂದಿರದ ಧರ್ಮದರ್ಶಿ ಹನುಮಂತ ನಾಯಕ ಬದಾಮಿ ಇತರರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಲಗಳ ಸದಸ್ಯರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಬ್ರಾಹ್ಮಣ ಮಹಾಸಭಾದ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಪಿ.ಆರ್.ಭಾಗ್ಯಲಕ್ಷ್ಮೀ ನಿರೂಪಿಸಿದರು. ಕಾರ್ಯದರ್ಶಿ ರಂಜನಾ ಭಟ್ ವಂದಿಸಿದರು.