ಹಾವೇರಿ: ಪಿಯುಸಿ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟವಾಗಿದ್ದು, ಬಹುದೊಡ್ಡ ಗುರಿಯೊಂದಿಗೆ ಮುನ್ನುಗ್ಗುವ ಮೂಲಕ ಗುರಿ ತಲುಪಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಭಗತ್‌ಸಿಂಗ್ ಕಾಲೇಜ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವಸಂತ-2025 ಉದ್ಘಾಟಿಸಿ ಅವರು ಮಾತನಾಡಿದರು. ನೀವು ಹಾವೇರಿಯಲ್ಲಿ ಒಂದು ಒಳ್ಳೆಯ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನಿಮಗೆ ಸ್ವತಂತ್ರ ಹೋರಾಟಗಾರರು ಪ್ರೇರಣೆಯಾಗಿರಲಿ. ಯಾವುದೇ ಜಾತಿ, ಮತ, ಪಂಥ ಮತ್ತು ಲಿಂಗಗಳ ಭೇದವಿಲ್ಲದ ಸಮಾಜವನ್ನು ನಿರ್ಮಿಸಲು ಪಣ ತೊಡಿ. ಈ ಕ್ಷಣದಿಂದಲೇ ಗುರಿಯತ್ತ ಗಮನಹರಿಸಿ ಓದಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ರತನ್ ಕಾಶಪ್ಪನವರ, ಉಪನ್ಯಾಸಕ ಬಸವರಾಜಪ್ಪ ಕೆ. ಮತ್ತು ಆಸ್ಮಾ ತಳಕಲ್ಲ ಮಾತನಾಡಿದರು. ಕಾಲೇಜ್ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಉಪನ್ಯಾಸಕಿ ವೀಣಾ ಪಾಟೀಲ ಪ್ರಮಾಣ ವಚನ ಭೋದಿಸಿದರು.
ಉಪನ್ಯಾಸಕರಾದ ರಚನಾ ಹರ್ತಿ, ಮೇಘನಾ ಎ., ರಶ್ಮಿ ಬಾಗರ್, ಪ್ರಕಾಶ ದೆಮಟ್ಟಿ, ದೀಪಾ ಜೋಗಿಹಳ್ಳಿ, ಲಕ್ಷ್ಮೀ ಕರಾಟೆ, ಪುಷ್ಪಾ ಕಡೂರು, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ವೀಣಾ ಇಪ್ಪಿಕೊಪ್ಪ ವಂದಿಸಿದರು. ಭೂಮಿಕಾ ಹಾಗೂ ಜ್ಯೋತಿ ಪುರ್ಲಿ ನಿರೂಪಿಸಿದರು.
ಕೋಟ್:
ಕಾಲೇಜು ಜೀವನ ಎಂದರೆ ಮೋಜು ಮಸ್ತಿಗಾಗಿ ಎಂದು ಭಾವಿಸದೇ ಇಂದಿನಿಂದಲೇ ಶಿಸ್ತಿನ ಜೀವನ ರೂಢಿಸಿಕೊಳ್ಳಿ. ಒಳ್ಳೆಯ ರ‌್ಯಾಂಕ್‌ನೊಂದಿಗೆ ಮತ್ತು ನಾಯಕತ್ವ ಗುಣಗಳೊಂದಿಗೆ ಈ ಕಾಲೇಜ್‌ನಿಂದ ಹೊರಹೋಗಿ ಉತ್ತಮ ಸಮಾಜ ನಿರ್ಮಾಣ ಮಾಡಿ.
- ಸತೀಶ ಎಂ.ಬಿ., ಚೇರ್ಮನ್, ಭಗತ್‌ಸಿಂಗ್ ಮಹಾವಿದ್ಯಾಲಯ