ಜಿಲ್ಲೆ

ಬಸವೇಶ್ವರನಗರ ಮಹಿಳಾ ವೇದಿಕೆಯಿಂದ ಪರಿಸರ ದಿನಾಚರಣೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದು ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆ ಅಧ್ಯಕ್ಷೆ ಲೀಲಾವತಿ ಪಾಟೀಲ ಹೇಳಿದರು.

ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ವತಿಯಿಂದ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಸಿಗಳ ಮಹತ್ವ ಹಾಗೂ ಅವುಗಳಲ್ಲಿ ಇರುವ ಔಷಧೀಯ ಗುಣಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.

ಶಶಿರೇಖಾ ಮಾಗನೂರ, ಲತಾ ಹಳಕೊಪ್ಪ, ರೇಣುಕಾ ನರಗುಂದ, ಡಾ.ಲೀಲಾವತಿ, ರಾಜೇಶ್ವರಿ ಬಿಷ್ಟನಗೌಡರ, ಉಷಾರಾಣಿ.ಜಿ.ಎಸ್., ಸುಮಂಗಲಾ ಸಣ್ಣಗೌಡರ, ನಿರ್ಮಲಾ ಯತ್ನಳ್ಳಿ, ಶಶಿಕಲಾ ಮಠದ, ಜಯಶ್ರೀ ಪಾಟೀಲ, ಇತರರಿದ್ದರು.