ಜಿಲ್ಲೆ

ಮಹಿಳೆ ಆಧುನಿಕತೆ ಜತೆಗೆ ಸಂಸ್ಕೃತಿ ಮರೆತಿಲ್ಲ; ಹರಸೂರ ಬಣ್ಣದ ಮಠದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಶ್ರೀ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮಹಿಳೆಯರು ನಮ್ಮ ಮೂಲ ಪರಂಪರೆ ಹಾಗೂ ಸಂಸ್ಕೃತಿಯನ್ನು ಮರೆತಿಲ್ಲ. ಆದ್ದರಿಂದಲೇ ನಮ್ಮ ಸನಾತನ ಆಚರಣೆಗಳು ಈಗಲೂ ಚಾಲ್ತಿಯಲ್ಲಿವೆ ಎಂದು ಹರಸೂರ ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ನಗರದ ಯಾಲಕ್ಕಿ ಓಣಿಯ ಹರಸೂರು ಬಣ್ಣದ ಮಠದಲ್ಲಿ ಶುಕ್ರವಾರ ಪುಷ್ಪಾರ್ಪಣ ಸೇವಾ ಸಮಿತಿ ಹಾಗೂ ಶ್ರೀ ಚೌಡೇಶ್ವರಿ ಮಹಿಳಾ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಪುಷ್ಪಾರ್ಪಣ ಸೇವಾ ಸಮಿತಿಯ ಮೂರನೇ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವರು ಮಾತ್ರ ಆಧುನಿಕತೆಯ ಭರದಲ್ಲಿ ಸಂಸ್ಕೃತಿ ಮರೆತು ವಿಕೃತಿ ಮೆರೆಯುತ್ತಿದ್ದಾರೆ. ಅಂಥವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದರು.

ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುಷ್ಪಾರ್ಪಣ ಸೇವಾ ಸಮಿತಿಯ ಅಧ್ಯಕ್ಷೆ ಪುಷ್ಪಾ ಬಸವರಾಜ ಹೊಸೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ತಾಯಂದಿರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಂಡಳಿ ಗೌರವಾಧ್ಯಕ್ಷೆ ಸೌಭಾಗ್ಯಮ್ಮ ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಳ್ಳಿ, ಬಸವರಾಜ ಜಾಬಿನ, ಶಂಕರಗೌಡ ಹಳೇಮನಿ, ಮಮತಾ ಜಾಬಿನ, ಸಿದ್ದಲಿಂಗಯ್ಯ ಶಾಸ್ತ್ರಿ, ಚೌಡೇಶ್ವರಿ ಮಹಿಳಾ ಮಂಡಳಿ, ಪುಷ್ಪಾರ್ಪಣ ಸೇವಾ ಸಮಿತಿ, ರುದ್ರಾಣಿ ಬಳಗ, ಶ್ರೀ ಸಾಯಿ ಭಜನಾ ಮಂಡಳಿ ಹಾಗೂ ಯಾಲಕ್ಕಿ ಓಣಿಯ ತಾಯಂದಿರು ಉಪಸ್ಥಿತರಿದ್ದರು

ಶೋಭಾ ನೇಜಕರ ಸ್ವಾಗತಿಸಿದರು. ಶಿದ್ದಲಿಂಗಯ್ಯ ಶಾಸ್ತ್ರಿ ವೇದಘೋಷ ನೆರವೇರಿಸಿದರು. ವೀಣಾ ಹಲಗಣ್ಣನವರ ವಂದಿಸಿದರು. ವೀಣಾ ಹೊಸಮಠ ನಿರೂಪಿಸಿದರು.