ಹಾವೇರಿ: ಇಲ್ಲಿಯ ಶಿವಲಿಂಗ ನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಶ್ರೀ ಬನಶಂಕರಿ ದೇವಿ ಅವತರಿಸಿದ ದಿನದ ಅಂಗವಾಗಿ ಬುಧವಾರ ದೇವಿಗೆ ಮಾವಿನ ಹಣ್ಣಿನ ಶೀಕರಣಿಯಿಂದ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಿ ಜನ್ಮೊತ್ಸವದ ಹಿನ್ನೆಲೆಯಲ್ಲಿ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದು, ಶೀಕರಣಿ ಪ್ರಸಾದ ಸ್ವಿಕರಿಸಿದರು. ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮನಾಥ ಕುದರಿ, ಅರ್ಚಕ ಎಂ.ಜಿ. ದೇವಾಂಗಮಠ, ಶರದ ಕುದರಿ, ವಿಶಾಲ ಕೊಪ್ಪಳ, ನಾರಾಯಣ ಕುದರಿ, ಚಿದಂಬರ ಕುದರಿ, ದೀಪಕ ಹುಲ್ಲೂರ, ಮಹೇಶ ಕುದರಿ, ಇತರರಿದ್ದರು.