ಹಾವೇರಿ: ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ 2023- 24ನೇ ಸಾಲಿನ ಯುವ ಜನೋತ್ಸವ ನಿಮಿತ್ತ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕಿರುಚಿತ್ರ (ರೀಲ್ಸ್ ತಯಾರಿಕೆ) ಸ್ಪರ್ಧೆ, ದ್ವಿತೀಯ ಪಿಯು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ನಾಟಕ ಸ್ಪರ್ಧೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ರಸ ಪ್ರಶ್ನೆ ಸ್ಪರ್ಧೆಗೆ ನೋಂದಾಯಿಸುವ ದಿನಾಂಕವನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.