ಜಿಲ್ಲೆ

ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಮಾಲತೇಶ, ವಿಜಯಲಕ್ಷ್ಮೀ ಗೆಲುವು

ಹಾವೇರಿ: ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ 2024ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಪಾಕಸ್ಪರ್ಧೆ ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿತು.
ಸ್ಪರ್ಧೆಯಲ್ಲಿ ಒಟ್ಟು 59 ಸ್ಪರ್ಧಿಗಳು ಭಾಗವಹಿಸಿದ್ದರು. ಸಿರಿಧಾನ್ಯಗಳಿಂದ ತಯಾರಿಸಿದ್ದ ಉಪ್ಪಿಟ್ಟು, ಪಲಾವ್, ಶಿರ, ಮತ್ತಿತರ ಬಗೆ ಬಗೆಯ ಖಾದ್ಯಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಖಾರ ಮತ್ತು ಸಿಹಿ ತಿನಿಸು ವಿಭಾಗಗಳಾಗಿ ವಿಂಗಡಿಸಲಾಗಿತ್ತು.
ಸಿಹಿ ತಿನಿಸು ವಿಭಾಗದಲ್ಲಿ 28 ಸ್ಪರ್ಧಿಗಳು ಭಾಗವಹಿಸಿದ್ದರು. ರಾಣೆಬೆನ್ನೂರ ತಾಲೂಕಿನ ಕಾಕೋಳ ಗ್ರಾಮದ ಮಾಲತೇಶ ಶಿಡಗನಾಳ ಆಯ್ಕೆಯಾಗಿದ್ದಾರೆ. ಖಾರ ತಿನಿಸು ವಿಭಾಗದಲ್ಲಿ 31 ಸ್ಪರ್ಧಿಗಳು ಭಾಗವಹಿಸಿದ್ದು, ಬ್ಯಾಡಗಿ ಪಟ್ಟಣದ ವಿಜಯಲಕ್ಷ್ಮೀ ಕಬ್ಬೂರುಮಠ ವಿಜೇತರಾದರು.
ಮೂವರು ನುರಿತ ಆಹಾರ ತಜ್ಞರು ತಿರ್ಪುಗಾರರಾಗಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಇತರರು ಪಾಲ್ಗೊಂಡಿದ್ದರು.