ಜಿಲ್ಲೆ

ರಸಗೊಬ್ಬರ ವಿತರಣೆಗೆ ಸೂಚನೆ

Dharwad

ಹಾವೇರಿ: ಕಡ್ಡಾಯವಾಗಿ ರೈತರ ಆಧಾರ್ ಸಂಖ್ಯೆ ಪಡೆದು ರಸಗೊಬ್ಬರ ವಿತರಣೆ ಮಾಡಬೇಕು. ಈ ಕುರಿತು ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ರೈತರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಸೂಚಿಸಿದ್ದಾರೆ.
ರಸಗೊಬ್ಬರ ಮಾರಾಟ ಮಾಡುವಾಗ ರೈತರ ಆಧಾರ್ ಸಂಖ್ಯೆಯನ್ನು ಪಾಯಿಂಟ್ ಆಪ್ ಸೇಲ್ ಯಂತ್ರದಲ್ಲಿ ಕಡ್ಡಾಯವಾಗಿ ದಾಖಲು ಮಾಡಿ ರಸಗೊಬ್ಬರ ಮಾರಾಟ ಮಾಡಬೇಕಾಗಿದೆ. ಹಾಗಾಗಿ, ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರ ಖರೀದಿಸುವಂತೆ ಕೋರಿದ್ದಾರೆ.