ಜಿಲ್ಲೆ

ಎಸಿಎಫ್ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ

ಹಾವೇರಿ: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸ್ಥಾಪನೆಯಾಗಿರುವ ಆ್ಯಂಟಿ ಕರಪ್ಶನ್ ಫೋರ್ಸ್ (ಎಸಿಎಫ್) ಸಂಸ್ಥೆಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾಧ್ಯಕ್ಷರಾಗಿ ಡಿ.ಬಿ.ಸೋಮಶೇಖರಗೌಡ, ಕಾರ್ಯದರ್ಶಿಯಾಗಿ ಶಂಕ್ರಪ್ಪ ಕಡೇಮನಿ ನೇಮಕಗೊಂಡಿದ್ದಾರೆ ಎಂದು ಎಸಿಎಫ್ ರಾಜ್ಯ ಉಸ್ತುವಾರಿ ಬಿ.ಎಚ್.ಜಮಾದಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ಮೋಸ, ಸುಲಿಗೆ, ಅತ್ಯಾಚಾರ, ವಂಚನೆ, ದಬ್ಬಾಳಿಕೆ, ಗೂಂಡಾಗಿರಿ, ವರದಕ್ಷಿಣೆ ಕಿರುಕುಳ, ಜಾತಿನಿಂದನೆ, ನಿರುದ್ಯೋಗ ಸಮಸ್ಯೆ, ಬಡತಮ, ರೈತರ ಸಮಸ್ಯೆಗಳು, ದೌರ್ಜನ್ಯ ಹಾಗೂ ಸರ್ಕಾರಿ ಸೌಲಭ್ಯದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವುದು ನಮ್ಮ ಸಂಘಟನೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ತಂಡ ಕೆಲಸ ಮಾಡಲಿದೆ ಎಂದರು.
ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಶ್ರೀನಿವಾಸ ಎಚ್.ಬಿ., ಉಪಾಧ್ಯಕ್ಷರಾಗಿ ನಿಂಗಪ್ಪ ಜಿ.ಬಿ., ಖಜಾಂಚಿಯಾಗಿ ಮಹಾಂತೇಶ ಬಂಡಿವಡ್ಡರ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಬಂಡಿವಡ್ಡರ, ಸದಸ್ಯರಾಗಿ ಶಿವಕುಮಾರ ವಡ್ಡರ ನೇಮಕವಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸಿಎಫ್ ಉತ್ತರ ಕರ್ನಾಟಕ ಸಂಚಾಲಕ ಎಂ.ಎನ್.ಗಡಾದ, ಜಿಲ್ಲಾಧ್ಯಕ್ಷ ಡಿ.ಬಿ.ಸೋಮಶೇಖರಗೌಡ, ಕಾರ್ಯದರ್ಶಿಯಾಗಿ ಶಂಕ್ರಪ್ಪ ಕಡೇಮನಿ, ಇತರರಿದ್ದರು.