ಜಿಲ್ಲೆ

ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ವಿಭಾಗಿಯ ಕಚೇರಿಯ ಎದುರು ಮಂಗಳವಾರ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಮತ್ತು ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಭಾವಿಪ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ವಿಜಯಲಕ್ಷ್ಮೀ ಪರಸಪ್ಪನವರ, ಸುದೀಪ ಲಮಾಣಿ, ಸುದೀಪ ಮಳಲಿ, ಪದ್ಮರಾಜ ಸಂದೀಪ, ಅರುಣ ಬಡಿಗೇರ, ಮಣಿಕಂಠ ಕಳಸ, ಅಪರ್ಣ ಎಸ್., ರಂಜಿತಾ ಎಂ.ಕೆ., ಇತರರಿದ್ದರು.