ಜಿಲ್ಲೆ

ಕಾನೂನು ವಿಷಯದಲ್ಲಿ ಆಳವಾದ ಜ್ಞಾನವಿರಲಿ

ಮರಿದೇವ ಹೂಗಾರ

ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬರಿ ಕಾನೂನು ಕಾಲೇಜ್​ನಲ್ಲಿ 2022-23 ನೇ ಸಾಲಿನ ಕಾಲೇಜ್ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಜರುಗಿತು.

ಧಾರವಾಡ ಹೈಕೋರ್ಟ್​ನ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ವಾಸುದೇವ ರೋಣ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನ ಮತ್ತು ಭಾಷಾ ಕೌಶಲ ವೃದ್ಧಿಸಿಕೊಂಡರೆ ನ್ಯಾಯಾಂಗದಲ್ಲಿ ವಿಫುಲ ಅವಕಾಶಗಳು ಲಭಿಸಲಿವೆ. ಕಾನೂನು ವಿಷಯದಲ್ಲಿ ಆಳವಾದ ಜ್ಞಾನವಿರಬೇಕು. ಅರ್ಥೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಇಂಥ ವಕೀಲರಿಗೆ ಬೇಡಿಕೆ ಹೆಚ್ಚಿದೆ ಎಂದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ, ಕ್ರೀಡಾಕೂಟ, ಭಾಷಣ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಉತ್ತಮ ನಡವಳಿಕೆ ಹೊಂದಿ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸಬೇಕೆಂದರು.

ಉಪನ್ಯಾಸಕಿ ಪ್ರೊ. ಪ್ರೀತಿ ಕಸ್ತೂರಿ ಇತರರು ಇದ್ದರು. ರೋಹಿಣಿ ಸ್ವಾಗತಿಸಿದರು. ಡಾ. ಶಾರದಾ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ. ಸಂಜೀವ ಹುಳ್ಳೂರ ವಾರ್ಷಿಕ ವರದಿ ಓದಿದರು. ಪೊ›. ಕವಿತಾ ಬೆಳಗಲಿ, ಪ್ರೊ. ಸ್ವಪ್ನಾ ಸೋಮಯಾಜಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ರಶೀಕಾ ಬಾಂದೇಕರ ವಂದಿಸಿದರು.