ತೇರದಾಳ ಸಮೀಪದ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಸಂಸ್ಥೆಯ ಜಿ.ಎಸ್.ಹಿರೇಮಠ ಉದ್ಘಾಟಿಸಿದರು. ಉಪನ್ಯಾಸಕ ಎಸ್.ಡಿ. ಹನಗಂಡಿ, ಜಿ.ಎಸ್. ಹಿರೇಮಠ, ಮಗಯ್ಯ ಹಿರೇಮಠ ಸಂಸ್ಥೆಯ ಆಡಳಿತ ಮಂಡಳಿಯವರು ಇದ್ದರು. 
ಜಿಲ್ಲೆ

ಎತ್ತರದ ಸಾಧನೆಗೆ ನಿರ್ದಿಷ್ಟ ಗುರಿ ಇರಲಿ

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ, ಉಪನ್ಯಾಸಕ ಎಸ್.ಡಿ. ಹನಗಂಡಿ, ವಿದ್ಯಾರ್ಥಿಗಳ ಸ್ವಾಗತ ಸಮಾರಂಭ,

ತೇರದಾಳ: ಸಾಧನೆ ಯಾರ ಸ್ವತ್ತು ಅಲ್ಲ. ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಸಾಧನೆ ಮಾಡಿದರೆ ಅಂದುಕೊಂಡ ಕನಸು ನನಸಾಗಲು ಸಾಧ್ಯ ಎಂದು ರಾಯಬಾಗ ತಾಲೂಕು ನಸಲಾಪುರದ ಎಡಿಕೆ ಕಾಲೇಜಿನ ಉಪನ್ಯಾಸಕ ಎಸ್.ಡಿ. ಹನಗಂಡಿ ಹೇಳಿದರು.

ಸಮೀಪದ ಸಸಾಲಟ್ಟಿಯ ಜ್ಞಾನಯೋಗಿ ಪಿಯುಸಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ನೀವು ಸಾಧನೆ ಮಾಡುವವರೆಗೆ ಯಾರೂ ನಿಮ್ಮನ್ನು ಗುರುತಿಸುವುದಿಲ್ಲ. ನಿರಂತರ ಪ್ರಯತ್ನ, ಸತತ ಅಧ್ಯಯನ ಅತಿ ಅಗತ್ಯ ಎಂದರು.

ಸಂಸ್ಥೆಯ ಡಾ.ಎಸ್.ಎನ್. ಸಲಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಹಲವು ಪ್ರತಿಭೆಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರು ಹೊಂದಿದ ಪ್ರಾಯೋಗಿಕ ಜ್ಞಾನ. ಅದು ಗ್ರಾಮೀಣರಿಗೆ ಮಾತ್ರ ದೊರಕುತ್ತದೆ. ಕಾಲೇಜು ವಿದ್ಯಾರ್ಥಿಗಳೂ ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು.

ಸಂಸ್ಥೆ ಅಧ್ಯಕ್ಷ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿ.ಎಸ್. ಹಿರೇಮಠ, ಸುರೇಂದ್ರ ಪಾಟೀಲ, ರಾಜಶೇಖರ ಜಲಪೂರ, ಡಾ. ಕುರಬೇಟ, ಜೆ.ಪಿ. ಜಲಪೂರ, ಎಚ್.ಎ.ಬೆಂಡಿಕಾಯಿ, ಪ್ರಾಚಾರ್ಯ ಎಂ.ಎಸ್. ಮುಡಸಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಶಾಂತ ಮರಡಿ, ಸಾನಿಕಾ ಜಲಪೂರ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.