ತಾಳಿಕೋಟೆ ತಾಲೂಕಿನ ಬಾವೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ತಾ.ಪಂ. ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಮಾತನಾಡಿದರು. ಎಸ್.ವೈ. ತಳವಾರ, ಶಾರದಾ ಮಲ್ಲಿಕಾರ್ಜುನ ಹಡಪದ ಇತರರಿದ್ದರು. 
ಜಿಲ್ಲೆ

ಆಹಾರ ಪದ್ಧತಿ ಉತ್ತಮವಾಗಿರಲಿ

ದತ್ತಾತ್ರೇಯ ಪಿ ಕುಲಕರ್ಣಿ

ತಾಳಿಕೋಟೆ: ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು, ನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ದೈಹಿಕ, ಮಾನಸಿಕ ಆರೋಗ್ಯ ಸಮಸ್ಥಿತಿಯಲ್ಲಿರುತ್ತದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಹೇಳಿದರು.

ತಾಲೂಕಿನ ಬಾವೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕು ಪಂಚಾಯತ್ ತಾಳಿಕೋಟೆ, ಗ್ರಾ.ಪಂ. ಬಾವೂರ ಸಹಯೋಗದಲ್ಲಿ ಆರೋಗ್ಯ ಅಮತ ಅಭಿಯಾನದಡಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಾಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಾವೂರ ಗ್ರಾ.ಪಂ. ಅಭಿವೃದ್ಧಿ ಅಧಿಕರಿ ಎಸ್.ವೈ. ತಳವಾರ ಮಾತನಾಡಿ, ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆಗೊಳಪಟ್ಟು ವೈದ್ಯರ ಸಲಹೆ ಪಾಲಿಸಿ ಎಂದರು.

ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು. ಗ್ರಾ.ಪಂ ಅಧ್ಯಕ್ಷೆ ಶಾರದಾ ಮಲ್ಲಿಕಾರ್ಜುನ ಹಡಪದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಐಇಸಿ ಸಂಯೋಜಕ ಮಲಕಪ್ಪ ಬಿ.ಎಂ., ತಾ.ಪಂ. ಮನರೇಗಾ ಆಡಳಿತ ಸಹಾಯಕ ತೌಸಿಫ್, ಆರೋಗ್ಯ ಇಲಾಖೆಯ ಎಚ್‌ಇಒ ಪ್ರವೀಣ ಬಿದರಿ, ಪಿಎಚ್‌ಒ ಜೆ.ಎಸ್ ಚಟ್ಟರ್, ಸಿಎಚ್‌ಒ ಶಂಕ್ರಮ್ಮ ಬಿರಾದಾರ, ಶಿವರಾಜ ಬಿರಾದಾರ, ಗ್ರಾಮ ಪಂಚಾಯತ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.