ಹೊರ್ತಿ: ವಿದ್ಯಾರ್ಥಿಗಳು ನಿರಂತರ ಓದುವ ಪ್ರಯತ್ನ ಮಾಡಿದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ. ಪರೀೆ ಬಂದಾಗ ಮಾತ್ರ ಓದುವುದಕ್ಕಿಂತ ನಿರಂತರ ಅಭ್ಯಾಸವಿದ್ದರೆ ಉತ್ತಮ ಅಂಕಗಳನ್ನು ಪಡೆದು ತಂದೆ&ತಾಯಿ ಹಾಗೂ ಶಿಕರಿಗೆ ಉತ್ತಮ ಹೆಸರನ್ನು ತರಲು ಸಾಧ್ಯ ಎಂದು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಹೇಳಿದರು.
ಶಾಂತಿ ಕುಟೀರದ ಸಮರ್ಥ ಸದ್ಗುರು ಗಣಪತರಾವ ಮಹಾರಾಜರು ಸ್ಥಾಪಿಸಿದ ಭಾರತೀಯ ಸುರಾಜ್ಯ ಸಂಸ್ಥೆಯ ಸುರಾಜ್ಯ ವಿದ್ಯಾ ವಿಕಾಸ ಯೋಜನೆ ಅಡಿ ಸಮೀಪದ ಕನ್ನೂರು ಗ್ರಾಮದ ಸಮುದಾಯ ಭವನದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತೀಯ ಸುರಾಜ್ಯ ಸಂಸ್ಥೆಯು ಸಾಮಾಜಿಕ ಕಳಕಳಿ ಹೊಂದಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾನೀಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಶ್ರೀಶೈಲೇಶ್ವರ ವಿದ್ಯಾಕೇಂದ್ರ, ಸಂಡೂರು ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತೀಯ ಸುರಾಜ್ಯ ಸಂಸ್ಥೆಯ ಕಾರ್ಯಾಧ್ಯ ಶ್ರೀನಿವಾಸ ಕುಲಕರ್ಣಿ, ಬಿ.ಜಿ.ಅಮೃತಾ, ಪ್ರಕಾಶ ಪತ್ತಾರ, ಪ್ರತಿಭಾ ಪಾಟೀಲ, ವಿಜಯಕುಮಾರ ಅವತಾಡೆ, ಎಸ್.ಎಂ.ಹಂಚಿನಾಳ, ಪಾಂಡುರಂಗ ಯರಗಟ್ಟಿ, ಎ.ಸಿ.ಗುಂಡಳ್ಳಿ ಇತರರಿದ್ದರು.