ಹುನಗುಂದ ತಾಲೂಕಿನ ಅಮರಾವತಿ ಬೈಲ್ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಸಾಮೂಹಿಕ ವಿವಾಹ ಸಮಾರಂಭವನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ಮಾಜಿ ಸದಸ್ಯ ಅಂದಾನೆಪ್ಪ ಹವಾಲ್ದಾರ, ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಬಸವರಾಜ ಗೌಡರ, ಶರಣಬಸಪ್ಪ ಬಂಡೆಪ್ಪನವರ ಇತರರಿದ್ದರು. 
ಜಿಲ್ಲೆ

ಸುಂದರ ಬದುಕು ಕಟ್ಟಿಕೊಳ್ಳಲಿ

Vijayapura - Desk - Gurappa Lokuri

ಹುನಗುಂದ: ಪ್ರತಿಯೊಬ್ಬರೂ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬೇಕೆಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಸಮೀಪದ ಅಮರಾವತಿ ಗ್ರಾಮದ ಬೈಲ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರು ಹಾಕಿಕೊಟ್ಟ ಮಾಗದರ್ಶನದಲ್ಲಿ ಜಾತ್ರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿ ನಾಡಿನ ಹರಗುರು ಚರಮೂರ್ತಿಗಳ ಆಶೀರ್ವಾದ ಪಡೆಯುತ್ತಿರುವವರು ನಿಜವಾಗಿ ಪುಣ್ಯವಂತರು ಎಂದರು.

ವಿಶ್ರಾಂತ ಬ್ಯಾಂಕ್ ವ್ಯವಸ್ಥಾಪಕ ಟಿ.ಎಸ್. ಎಡ್ಡೇರ ಮಾತನಾಡಿದರು.

ಹರಸೂರ ಪರ್ವತಲಿಂಗೇಶ್ವರ ಸಂಸ್ಥಾನಮಠದ ಸಿದ್ಧರಾಮ ಶಿವಾಚಾರ್ಯರು, ಎಪಿಎಂಸಿ ಮಾಜಿ ಸದಸ್ಯ ಅಂದಾನೆಪ್ಪ ಹವಾಲ್ದಾರ, ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಬಸವರಾಜ ಗೌಡರ, ಶರಣಬಸಪ್ಪ ಬಂಡೆಪ್ಪನವರ, ಮೃತ್ಯುಂಜಯ ಕೊಪ್ಪರದ, ನಿಂಗಪ್ಪ ಅಮರಾವತಿ, ಶಿಕ್ಷಕಿ ಪಿ.ಬಿ. ನದ್ಾ ಉಪಸ್ಥಿತರಿದ್ದರು.

5 ನವ ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿವೃತ್ತ ಶಿಕ್ಷಕ ಜಗದೀಶ ಪತ್ತಾರ ಸ್ವಾಗತಿಸಿ, ವಂದಿಸಿದರು.