ಜಿಲ್ಲೆ

ಅಕ್ರಮವಾಗಿ ಸಂಗ್ರಹಿಸಿದ್ದ 68 ಸಾವಿರ ರೂ. ಮೌಲ್ಯದ ಮರಳು ವಶ

Haveri - Kariyappa Aralikatti

ಹಾವೇರಿ: ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 68 ಸಾವಿರ ರೂ. ಮೌಲ್ಯದ ಮರಳನ್ನು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನ ಹಾವಣೂರ ಗ್ರಾಮದ ಬಳಿ ಗುರುವಾರ ನಡೆದಿದೆ.

ಗ್ರಾಮದ ಶ್ರೀಕಾಂತ ಶಿವಪ್ಪ ಹೌಂಸಿ ಎಂಬುವನು ನದಿಪಾತ್ರದಲ್ಲಿ ತೆಪ್ಪದ ಸಹಾಯದಿಂದ ಅಕ್ರಮವಾಗಿ ತೆಗೆದು ಸಂಗ್ರಹಿಸಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 80 ಮೆಟ್ರಿಕ್​ ಟನ್​ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.