ಹಟ್ಟಿಚಿನ್ನದಗಣಿಯಲ್ಲಿ ಚೆೃತ್ರ ಗೌರಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. 
ಜಿಲ್ಲೆ

ಮುತ್ತೈದೆಯರಿಂದ ಚೈತ್ರಗೌರಿ ಆಚರಣೆ

ರುದ್ರಪ್ಪ ವಾಲಿ

ಹಟ್ಟಿಚಿನ್ನದಗಣಿ: ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಚೈತ್ರ ಮಾಸದ ಮೂರನೆ ದಿನ(ತದಿಗೆ) ಚೈತ್ರಗೌರಿ ಹಬ್ಬವನ್ನು ಶುಕ್ರವಾರ ಆಚರಣೆ ಮಾಡಲಾಯಿತು. ಮರ, ಕಂಚು ಮತ್ತು ಹಿತ್ತಾಳೆಯ ಪಾರ್ವತಿ ಪ್ರತಿಮೆಯನ್ನು ಹಸಿರಿನ ಬೆಳೆಯ ಹೊದಿಕೆಯಿಂದ ಅಲಂಕೃತಗೊಳಿಸಿ, ದೇವಿಯನ್ನು ಪ್ರತಿಷ್ಠಾಪಿಸಿ, ಮಂತ್ರಪಠಿಸಿ, ಪೂಜೆಗೈದು, ಹೂವಿಳ್ಯ ಮಾಡುವುದು. ಸಾಯಂಕಾಲ ಮುತ್ತೈದೆಯರಿಗೆ ಪಾದಪೂಜೆ, ಕಡಲೆ ಬೆಳೆಯ ಕೋಸಂಬರಿ ನೀಡುವ ಕಾರ್ಯಕ್ರಮ ನಡೆಯಿತು. ಮದುವೆಯಾದ ನವವಧುಗಳು ಹಾಗೂ ಮದುವೆಯಾದ ಗೃಹಿಣಿಯರು ಐದು ವರ್ಷದವರೆಗೆ ಸದರಿ ಹಬ್ಬವನ್ನು ಆಚರಿಸುವುದು ವಿಶೇಷ