ಮೇದಿನಾಪೂರ್ ಗ್ರಾಮದಲ್ಲಿ ಮನೆಯ ಆವರಣದಲ್ಲಿ ಮಹಿಳೆ ಮಳೆ ನೀರು ತುಂಬಿ ಚಲ್ಲುತ್ತಿರುವುದು. 
ಜಿಲ್ಲೆ

ಮನೆ ನುಗ್ಗಿದ ಮಳೆ ನೀರು

ಪ್ರವೀಣ ಉದುಸಾ ದಲಬಂಜನ್

ಹಟ್ಟಿಚಿನ್ನದಗಣಿ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೋಠಾ ಗ್ರಾಪಂ ವ್ಯಾಪ್ತಿಯ ಮೇದಿನಾಪೂರ ಗ್ರಾಮದಲ್ಲಿ ನೀರು ಮನೆ ನುಗ್ಗಿದೆ. ಜೆಜೆಎಂ ಕಾಮಗಾರಿಗೆ ಸಿಸಿ ರಸ್ತೆ ಅಗೆದು ಅರ್ಧಕ್ಕೆ ಬಿಟ್ಟಿರುವುದು ಹಾಗೂ ಅವೈಜ್ಞಾನಿಕ ರಸ್ತೆ ಚರಂಡಿ ನಿರ್ಮಾಣ ಮಾಡಿದ್ದರಿಂದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಗ್ರಾಪಂಗೆ ಹಿಡಿಶಾಪ ಹಾಕಿದರು.