ಹಟ್ಟಿಚಿನ್ನದಗಣಿಗೆ ಸಮೀಪದ ವೀರಾಪೂರ್ ಗ್ರಾಮದ ಹೊರ ವಲಯದ ಗೋಕಟ್ಟೆ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಮಾಡಿಸಲಾಯಿತು. ಪಿಡಿಒ ಗುರುಸಿದ್ಧಪ್ಪ, ರಮೇಶ್ ವೀರಾಪೂರ್, ಮಹ್ಮದ್ ಹನೀಫ್, ಫಕೃದ್ಧಿನ್, ರಾಘವೇಂದ್ರ, ಈರಪ್ಪ, ಬಾಲಪ್ಪ, ಬಸವರಾಜ್ ಕಟ್ಟಿಮನಿ, ಅಮರೇಶ್ ಗುರೀಕಾರ್, ನಿಂಗಪ್ಪ ಇತರರಿದ್ದರು.  
ಜಿಲ್ಲೆ

ಕಾರ್ಮಿಕರ ದಿನ ತ್ಯಾಗ-ಬಲಿದಾನದ ಸಂಕೇತ

ಹಟ್ಟಿಚಿನ್ನದಗಣಿ: ದೇಶದ ಅಭಿವೃದ್ಧಿ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ಕಾರ್ಮಿಕರ ತ್ಯಾಗ-ಬಲಿದಾನದ ಸಂಕೇತವಾಗಿ ವಿಶ್ವ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ್ ಯಾದವ್ ಹೇಳಿದರು.

ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್, ಗೆಜ್ಜಲಗಟ್ಟಾ ಹಾಗೂ ವೀರಾಪೂರ್ ಗ್ರಾಮದ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಡಿಯುವ ವರ್ಗದ ಕಾರ್ಮಿಕರನ್ನು ಗೌರವಿಸಬೇಕೆಂದರು.
2024 ಲೋಕಸಭಾ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಹಕ್ಕುಗಳನ್ನು ಕೇಳುವ ಮುನ್ನ ಮೊದಲು ಮತದಾನ ಮಾಡಬೇಕು. ಯಾವುದೇ ಆಮೀಷಕ್ಕೊಳಗಾಗದೆ ದೇಶದ ಅಭ್ಯುದಯಕ್ಕೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಎಂದು ಹೇಳಿದರು.

ಪಿಡಿಒ ಗುರುಸಿದ್ಧಪ್ಪ, ಗ್ರಾಪಂ ಸದಸ್ಯ ರಮೇಶ್ ವೀರಾಪೂರ್, ಮಹ್ಮದ್ ಹನೀಫ್, ಫಕೃದ್ಧಿನ್, ಮಾತನಾಡಿದರು. ಜೆಇ ರಾಘವೇಂದ್ರ, ಸಂಜೀವಿನಿ ಟಿಪಿಎಂ ಈರಪ್ಪ, ತಾಪಂ ಸಂಯೋಜಕ ಬಾಲಪ್ಪ, ಪ್ರಮುಖರಾದ ಬಸವರಾಜ್ ಕಟ್ಟಿಮನಿ, ಅಮರೇಶ್ ಗುರೀಕಾರ್, ನಿಂಗಪ್ಪ ಹಾಗೂ ನರೇಗಾ ಕೂಲಿಕಾರ್ಮಿಕರು ಇದ್ದರು.