ಹಟ್ಟಿಚಿನ್ನದಗಣಿ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಚಂದ್ರಶೇಖರ್‌ಗೆ ಡಿವೈಎಫ್‌ಐ ನಗರ ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಚನ್ನಬಸವ ಹೊಸೂರು, ಅಲ್ಲಾಭಕ್ಷ ಸಾಸ್ವಿಹಾಳ, ಸದ್ದಾಂ ಹುಸೇನ್, ರಮೇಶ ವೀರಾಪೂರ, ಫಯಾಜ್ ಖುರೇಷಿ, ರೌಫ್ ಖುರೇಷಿ ಇತರರಿದ್ದರು. 
ಜಿಲ್ಲೆ

ಎರಡೂ ಬದಿ ಚರಂಡಿ ನಿರ್ಮಿಸಿ

ಹಟ್ಟಿಚಿನ್ನದಗಣಿ: ಪಟ್ಟಣದ ಏಳನೇ ವಾರ್ಡ್‌ನಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಹಟ್ಟಿ ಘಟಕ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಚಂದ್ರಶೇಖರ್‌ಗೆ ಗುರುವಾರ ಮನವಿ ಸಲ್ಲಿಸಿತು.

ವಾರ್ಡ್‌ನಲ್ಲಿ ಒಂದು ಭಾಗದಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಇನ್ನೊಂದು ಭಾಗದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಎರಡು ತಿಂಗಳ ಹಿಂದೆ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಇನ್ನೊಂದು ಬದಿಯಲ್ಲಿ ರಸ್ತೆ ಒತ್ತುವರಿ ಮಾಡಿದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಂದು ಕಡೆ ಚರಂಡಿ ನಿರ್ಮಾಣಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಗೆಜ್ಜಲಗಟ್ಟಾ ಗ್ರಾಪಂ ಸದಸ್ಯ ರಮೇಶ್ ವೀರಾಪೂರ ಆರೋಪಿಸಿದರು.

ನಿವಾಸಿಗಳಿಗೆ ತೊಂದರೆಯಾಗದಂತೆ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಒಂದೇ ಕಡೆ ಚರಂಡಿ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪಟ್ಟಣ ಪಂಚಾಯಿತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯರಾದ ಚನ್ನಬಸವ ಹೊಸೂರು, ಅಲ್ಲಾಭಕ್ಷ ಸಾಸ್ವಿಹಾಳ, ಸದ್ದಾಂ ಹುಸೇನ್, ಮುಖಂಡರಾದ ಫಯಾಜ್ ಖುರೇಷಿ, ರೌಫ್ ಖುರೇಷಿ, ಎಂ.ಡಿ. ದೌಲತ, ರಾಜು, ದಾದಾ ಬ್ಯಾಂಕ್, ಅಮರೇಶ್ ಗುರಿಕಾರ ಇದ್ದರು.