ಹಟ್ಟಿಚಿನ್ನದಗಣಿ: ಪಟ್ಟಣಕ್ಕೆ ಆಗಮಿಸಿದ ಸಾರಿಗೆ ಬಸ್‌ನ್ನು ತಡೆದ ಸಾರಿಗೆ ನಿಗಮದ ನೌಕರರ ಕುಟುಂಬಸ್ಥರು, ಖಾಸಗಿ ವಾಹನಗಳ ಮಾಲೀಕರು, ಚಾಲಕ ಹಾಗೂ ನಿರ್ವಾಹಕರ ಮೇಲೆ ಮಂಗಳವಾರ ಹಲ್ಲೆಗೆ ಮುಂದಾದರು.
ಲಿಂಗಸುಗೂರು ಘಟಕದ ಲಿಂಗಸುಗೂರು-ಹಟ್ಟಿ ಮಾರ್ಗದ ಬಸ್ ಬೆಳಗ್ಗೆ 10ಕ್ಕೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ತುಂಬಿ ನಿಂತಿದ್ದನ್ನು ಕಂಡ ಸಾರಿಗೆ ನೌಕರರ ಕುಟುಂಬಸ್ಥರು, ಖಾಸಗಿ ವಾಹನಗಳ ಮಾಲೀಕರು ಮತ್ತು ಚಾಲಕರು, ಮುಷ್ಕರದ ನಡುವೆಯೂ ಬಸ್ ಓಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಬಸ್‌ನ ವಾಹಕ, ನಿರ್ವಾಹಕರ ಹಾಗೂ ನಿಯಂತ್ರಣಾಧಿಕಾರಿ ಮೇಲೆ ಹಲ್ಲೆಗೆ ಮುಂದಾದರು.
ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಖಾಲಿ ವಾಹನವನ್ನು ಡಿಪೋಗೆ ಕಳುಹಿಸಲಾಯಿತು.