ಹಟ್ಟಿಯಲ್ಲಿ ಎಸ್‌ಎಫ್‌ಐ, ಎಐಡಿಡಬ್ಲುೃಎ, ಡಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ರ‌್ಯಾಲಿ ನಡೆಸಿದರು. ಸಿಐಟಿಯು ತಾಲೂಕು ಸಂಚಾಲಕ ಮೊಹಮ್ಮದ್ ಹನೀಫ್, ಪವನ್ ಯಲಗಟ್ಟಾ, ಶಕುಂತಲಾ ಪಾಟೀಲ್, ವನಜಾಕ್ಷಿ, ಸಾಹೇರಾ ಖಾನ್, ತೈಯ್ಯಬಾ, ಕನಕ, ಶಾಂತಕುಮಾರಿ, ವೆಂಕಟೇಶ ಇತರರಿದ್ದರು. 
ಜಿಲ್ಲೆ

ಅತ್ಯಾಚಾರಿ, ಕೊಲೆಗಾರನಿಗೆ ಗಲ್ಲು ಶಿಕ್ಷೆ ಆಗಲಿ

ಶಾಮಸುಂದರ್ ಕೊಪ್ಪಳಕರ್

ಹಟ್ಟಿಚಿನ್ನದಗಣಿ: ಕೊಲೆ ಹಾಗೂ ಅತ್ಯಾಚಾರ ಮಾಡಿದ ಪಾಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ, ಎಐಡಿಡಬ್ಲುೃಎ, ಡಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಕ್ಯಾಂಪ್ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅತ್ಯಾಚಾರ, ಕೊಲೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಪಾಲಕರು ಮಕ್ಕಳನ್ನು ಶಾಲೆ-ಕಾಲೇಜಿಗೆ ಕಳಿಸಲು ಭಯಪಡುವಂತಾಗಿದೆ. ಪದವಿ ಶಿಕ್ಷಣಕ್ಕಾಗಿ ಲಿಂಗಸುಗೂರಿನಿಂದ ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ತೆರಳುತಿದ್ದ ವಿದ್ಯಾರ್ಥಿನಿ ಶಿಫಾ ಅವರನ್ನು ಶೇಕ್ ಮುಬಿನ್ ಎಂಬ ದುಷ್ಕರ್ಮಿ ಬರ್ಬರವಾಗಿ ಕೊಲೆ ಮಾಡಿದ್ದು, ಭಯ ಮೂಡಿಸಿದೆ. ಮಾನ್ವಿ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಶಿವನಗೌಡ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಕೃತ್ಯ ಎಸಗಿದ ಇಬ್ಬರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಸಿಐಟಿಯು ತಾಲೂಕು ಸಂಚಾಲಕ ಮೊಹಮ್ಮದ್ ಹನೀಫ್, ಪವನ್ ಯಲಗಟ್ಟಾ, ಶಕುಂತಲಾ ಪಾಟೀಲ್, ವನಜಾಕ್ಷಿ, ಸಾಹೇರಾ ಖಾನ್, ತೈಯ್ಯಬಾ, ಕನಕ, ಶಾಂತಕುಮಾರಿ, ಫಕ್ರುದ್ದೀನ್, ವೆಂಕಟೇಶ, ಅಲ್ಲಾಬಕ್ಷ್ಷಿ, ಶ್ರೀಧರ, ಮಹಾಂತೇಶ, ನಜೀರ್, ಹಾಜಿಮೌಲಾ, ಕಮಲ, ನಿಂಗಪ್ಪ, ಚನ್ನಬಸವ ಇತರರಿದ್ದರು.