ಬೇಡ ಜಂಗಮ ಸಮಾಜದ ಜಾಗೃತಿ ಕಾರ್ಯಕ್ರಮ
ಹಟ್ಟಿ ಚಿನ್ನದ ಗಣಿ: ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕು. ಆಧುನಿಕತೆ ಪ್ರಭಾವದಿಂದ ಸಂಪ್ರದಾಯ ಮರೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕೆಂದು ಯರಡೋಣಾ ಗುರುಮಠದ ಮುರುಘೇಂದ್ರ ಶಿವಯೋಗಿಗಳು ಹೇಳಿದರು.
ಹಟ್ಟಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಬೇಡ ಜಂಗಮ ಸಮಾಜದ ಜಾಗೃತಿ ಹಾಗೂ ಪದಾಧೀಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಆಶೀರ್ವಚನ ನೀಡಿದರು. ದೇವರಭೂಪೂರಿನ ಅಭಿನವ ಗಜದಂಡ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪತ್ರಕರ್ತ ಅಮರೇಶಸ್ವಾಮಿ ಬಲ್ಲಟಗಿ, ಮುಖಂಡ ಮಹಾದೇವಯ್ಯಸ್ವಾಮಿ ಗೌಡೂರು ಮಾತನಾಡಿದರು.
ಈ ಸಂದರ್ಭ ಪದಾಧೀಕಾರಿಗಳ ಪದಗ್ರಹಣ ನಡೆಯಿತು. ಮುಖಂಡರಾದ ವೀರಭದ್ರಯ್ಯಸ್ವಾಮಿ ಹಟ್ಟಿ ನಗರ ಘಟಕದ ಅಧ್ಯಕ್ಷ ಮಹಾಂತೇಶಸ್ವಾಮಿ ಪದಾಧಿಕಾರಿಗಳಾದ ಕ.ವಿ.ಕಳ್ಳಿಮಠ, ಬಸವರಾಜಸ್ವಾಮಿ ನಗನೂರು, ವೀರಭದ್ರಸ್ವಾಮಿ ಇತರರಿದ್ದರು.