ಹಟ್ಟಿಯಲ್ಲಿ ಸಾರ್ವಜನಿಕರಿಗೆ ಹಿಂದು ಜಾಗರಣ ವೇದಿಕೆಯಿಂದ ಅಯೋಧ್ಯೆಯ ಅಕ್ಷತೆ ಮತ್ತು ಶ್ರೀರಾಮನ ಭಾವಚಿತ್ರ ವಿತರಣೆ ಮಾಡಲಾಯಿತು. ಬಿಜೆಪಿ ಮುಖಂಡ ಎನ್.ಸ್ವಾಮಿ ನಾಯಿಕೋಡಿ, ನವಭಾರತ ಹಿಂದು ದಲಿತ ಸಂಘಟನೆೆ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್, ಪ್ರಮುಖರಾದ ಪಂಪಣ್ಣ ಭೇರಿ, ಗೂಳಪ್ಪ ಜಾಗಟಗಲ್, ವೀರೇಶ್ ನಾಯಕ್, ವಿನೋದ್, ಶಿವರಾಜ್, ವೀರೇಶ್, ಶರಣು, ಭರತ್ ಇದ್ದರು. 
ಜಿಲ್ಲೆ

ಐತಿಹಾಸಿಕ ದಿನವಾಗಲಿದೆ 22

ಹಟ್ಟಿಚಿನ್ನದಗಣಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಐತಿಹಾಸಿಕ ದಿನವಾಗಿದೆ. 500 ವರ್ಷದ ಕನಸು ನನಸಾದ ದಿನವನ್ನು ಐತಿಹಾಸಿಕ ಘಟನೆಯನ್ನಾಗಿಸಬೇಕೆಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ್ ಬೆಳಗಲ್ ಹೇಳಿದರು.

ಹಟ್ಟಿಯಲ್ಲಿ ಸಾರ್ವಜನಿಕರಿಗೆ ಅಯೋಧ್ಯೆ ಅಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರಗಳನ್ನು ನೀಡಿ ಸೋಮವಾರ ಮಾತನಾಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರದಿಂದ ರಾಮಾಯಣದ ವೈಭವ ದೇಶದಲ್ಲಿ ಮರುಕಳಿಸಲಿದೆ. ದೇವಸ್ಥಾನ ಉದ್ಘಾಟನೆಯನ್ನು ಅತ್ಯಂತ ವಿಜೃಂಭಣೆಯಿಂದ ಸಂಭ್ರಮಿಸಬೇಕೆಂದು ಕರೆ ನೀಡಿದರು.