ಹಟ್ಟಿಚಿನ್ನದಗಣಿ: ಬಸವೇಶ್ವರ ಜಯಂತಿ ನಿಮಿತ್ತ ಹಟ್ಟಿ, ಕ್ಯಾಂಪ್ ಹಾಗೂ ವಿವಿಧೆಡೆ ಭಾವಚಿತ್ರದ ಮೆರವಣಿಗೆ ಹಾಗೂ ಪೂಜಾ ಕಾರ್ಯಕ್ರಮಗಳು ಶುಕ್ರವಾರ ನಡೆದವು.
ಕ್ಯಾಂಪಿನ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಬಸವಸೇವಾ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಕುಂಭ, ಡೊಳ್ಳು ಹಾಗೂ ಕಲಾತಂಡದೊಂದಿಗೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಮುಖರಾದ ಎನ್.ಸ್ವಾಮಿ ನಾಯಿಕೋಡಿ, ನಿಂಗು ಹೊಳ್ಯಾಚಿ, ಶಿವು ಹೊಳ್ಯಾಚಿ, ಬಸವ ಕುರ್ಡಿ, ಪ್ರಶಾಂತ್ ಬುದ್ದಿನ್ನಿ, ಮದ್ದಾನೆಪ್ಪ ನಾಗಲೀಕರ್, ವಿಠೋಬ್ ಶೆಟ್ಟಿ, ಗಂಗಾಧರ್ ಆದಿಮನಿ, ಅಮರೇಶ್ ಕುರ್ಡಿ, ರಮೇಶ್ ಉಳಿಮೇಶ್ವರ, ಅಕ್ಕನ ಬಳಗದ ಶಾಂತಾ ಅಂಕುಶದೊಡ್ಡಿ, ಚಂದ್ರಕಲಾ, ಸುಮಂಗಲಾ ಕುರ್ಡಿ, ಅಮರಮ್ಮ ಹಿರೇಮಠ, ಈರಮ್ಮ ಅಂಗಡಿ ಇತರರಿದ್ದರು.
ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ, ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ಕಚೇರಿ, ವಿವಿಧ ಇಲಾಖೆ ಕಚೇರಿಗಳು, ಪ.ಪಂ. ಶಾಲೆ-ಕಾಲೇಜುಗಳು, ಆನ್ವರಿ, ಗೆಜ್ಜಲಗಟ್ಟಾ, ಕೋಠಾ, ಪೈದೊಡ್ಡಿ, ರೋಡಲಬಂಡಾ ಗ್ರಾ.ಪಂ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.