ಹಟ್ಟಿಯ ವಾಲ್ಮೀಕಿ ಸಂಘದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷ ಎಂಡಿಆರ್ ಸಂಧಾನಿ, ಪ್ರಮುಖರಾದ ಗುಂಡಪ್ಪಗೌಡ ದಳಪತಿ ಪೊ.ಪಾ., ಎಚ್.ಎ ಲಿಂಗಪ್ಪ, ಕನಕರಾಜ ಗುರಿಕಾರ, ದಾಸಪ್ಪಗೌಡ, ಎಂ.ಲಿಂಗರಾಜ, ಎನ್.ಸ್ವಾಮಿ ನಾಯಿಕೊಡಿ, ಶಂಕರಗೌಡ ಬಳಗಾನೂರು, ಶಾಂತಪ್ಪ ಆನ್ವರಿ, ಅಂಜನೇಯ ಗುರಿಕಾರ, ಸಿದ್ದಪ್ಪ ಮುಂಡರಗಿ, ಬುಜ್ಜನಾಯಕ, ಗುಂಡಪ್ಪ ಮಾಸ್ತರ್, ಹನುಮಂತರಡ್ಡಿ, ಬಾಬು ನಾಯಿಕೊಡಿ, ನಾಗರೆಡ್ಡಿ ಜೇರಬಂಡಿ, ಬಸವರಾಜ ಪೈ ಇತರರಿದ್ದರು. 
ಜಿಲ್ಲೆ

ವಾಲ್ಮೀಕಿ ಸಮುದಾಯ ಕೊಡುಗೆ ಅಪಾರ

ಪ್ರವೀಣ ಉದುಸಾ ದಲಬಂಜನ್

ಹಟ್ಟಿಚಿನ್ನದಗಣಿ: ಆದಿಕವಿ ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿರುವ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕೆಂದು ಹಟ್ಟಿ ಚಿನ್ನದಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ ಶಫೀ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಏಕೈಕ ಚಿನ್ನದ ಗಣಿ ಕಂಪನಿಗೆ ವಾಲ್ಮೀಕಿ ಸಮುದಾಯ ಕೊಡುಗೆ ಅಪಾರ. ಹಿಂದೆ ಸಮಾಜದ ಮುಖಂಡರು ಕಟ್ಟಿ ಬೆಳಸಿದ ಗಣಿ ಕಂಪನಿ ಕಾರ್ಮಿಕ ಸಂಘ ಇಂದು ಬಲಿಷ್ಠವಾಗಿ ಬೆಳೆದಿದೆ ಎಂದರು.

ಹಟ್ಟಿ ಪೊಲೀಸ್ ಠಾಣೆಯಲ್ಲಿ ಸಿಪಿಐ ಹೊಸಕೆರಪ್ಪ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಪಪಂ ಅಧ್ಯಕ್ಷ ಎಂಡಿಆರ್ ಸಂಧಾನಿ, ಪ್ರಮುಖರಾದ ಗುಂಡಪ್ಪಗೌಡ ದಳಪತಿ ಪೊ.ಪಾ., ಎಚ್.ಎ ಲಿಂಗಪ್ಪ, ಕನಕರಾಜ ಗುರಿಕಾರ, ದಾಸಪ್ಪಗೌಡ, ಎಂ.ಲಿಂಗರಾಜ, ಎನ್.ಸ್ವಾಮಿ ನಾಯಿಕೊಡಿ, ಶಂಕರಗೌಡ ಬಳಗಾನೂರು, ಶಾಂತಪ್ಪ ಆನ್ವರಿ, ಅಂಜನೇಯ್ ಗುರಿಕಾರ, ಸಿದ್ದಪ್ಪ ಮುಂಡರಗಿ, ಬುಜ್ಜನಾಯಕ, ಗುಂಡಪ್ಪ ಮಾಸ್ತರ್, ಹನುಮಂತರಡ್ಡಿ, ಬಾಬು ನಾಯಿಕೊಡಿ, ನಾಗರೆಡ್ಡಿ ಜೇರಬಂಡಿ, ಬಸವರಾಜ ಪೈ ಇತರರಿದ್ದರು.