ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಟಿ.ವಡ್ಡರಹಳ್ಳಿ ಕಾಲನಿಯ ಸರ್ಕಾರಿ ಶಾಲೆಗೆ ನೀರು ಶುದ್ಧೀಕರಣ ಆಕ್ವಾಗಾರ್ಡ್ ಕೊಡುಗೆ ನೀಡಿ, ಶಿಕ್ಷಕಿ ಭಾರತಿಯವರನ್ನು ಸನ್ಮಾನಿಸಲಾಯಿತು. ನಿಸ್ವಾರ್ಥ ಗೆಳೆಯರ ಬಳಗದ ಮುಖಂಡ ಹೇಮಂತ್, ಹೇಮಂತ್, ರಾಜೇಶ್ ಹಾಗೂ ವಿನಯ್ ಇತರರು ಇದ್ದರು. 
ಹಾಸನ

ಸರ್ಕಾರಿ ಶಾಲೆಗೆ ನೀರು ಶುದ್ಧೀಕರಣ ಯಂತ್ರ ಕೊಡುಗೆ

ನಿಸ್ವಾರ್ಥ ಗೆಳೆಯರ ಬಳಗದಿಂದ ಸೇವಾ ಕಾರ್ಯ

ಬೇಲೂರು: ತಾಲೂಕಿನ ಟಿ.ವಡ್ಡರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿಸ್ವಾರ್ಥ ಗೆಳೆಯರ ಬಳಗದಿಂದ ಶನಿವಾರ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.

ನಿಸ್ವಾರ್ಥ ಗೆಳೆಯರ ಬಳಗದ ಮುಖಂಡ ಹೇಮಂತ್ ಮಾತನಾಡಿ, ತಾಲೂಕಿನ ಮಾದಿಹಳ್ಳಿ ಹೋಬಳಿಯ ಸರ್ಕಾರಿ ಶಾಲೆಯಲ್ಲಿ 27 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕುಡಿಯುವ ನೀರಿಗಾಗಿ ಕೊಡಗಳಲ್ಲಿ ನೀರನ್ನು ತಂದು ಬಳಸುತ್ತಿದುದ್ದನ್ನು ಗಮನಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಮ್ಮ ನಿಸ್ವಾರ್ಥ ಗೆಳೆಯರ ಬಳಗದಿಂದ ಆಕ್ವಾಗಾರ್ಡ್ ಅನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.

ಶಿಕ್ಷಕ ಆನಂದ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಇತರರೂ ಇಂತಹ ಕಾರ್ಯಗಳಲ್ಲಿ ಕೈಜೋಡಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ನಿಸ್ವಾರ್ಥ ಗೆಳೆಯರ ಬಳಗದ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ನಿಸ್ವಾರ್ಥ ಗೆಳೆಯರ ಬಳಗದ ಹೇಮಂತ್, ರಾಜೇಶ್ ಹಾಗೂ ವಿನಯ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.