ಅಣತಿ ಗ್ರಾಮದ ಲಕ್ಷ್ಮಿಪುರ ಬಡಾವಣೆಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಶಿವೇಗೌಡ, ವೆಂಕಟೇಶ್, ಎ.ಬಿ.ಮಂಜುನಾಥ್, ನಾಗೇಶ್, ನಂದೀಶ್, ದಿವಾಕರ್ ಇದ್ದರು.  
ಹಾಸನ

ಮೇವು ಬೆಳೆಯುವಂತೆ ರೈತರಿಗೆ ಸಲಹೆ

ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಬಾಗೂರು: ಅಣತಿ ಗ್ರಾಮದ ದೊಡ್ಡ ಕೆರೆಗೆ ಹೇಮಾವತಿ ನದಿ ನೀರು ಹರಿಸಿ ಅರ್ಧದಷ್ಟು ಕೆರೆ ತುಂಬಿಸಿರುವುದರಿಂದ ಸುತ್ತಮುತ್ತಲಿನ ಸುಮಾರು 30 ಗ್ರಾಮಗಳ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಅಣತಿ ಗ್ರಾಮದ ಲಕ್ಷ್ಮಿಪುರ ಬಡಾವಣೆಯಲ್ಲಿ ಸೋಮವಾರ -20 ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆರೆಗೆ ನೀರು ಹರಿಸಿರುವ ಪರಿಣಾಮ ಅಂತರ್ಜಲ ಮರುಪೂರ್ಣಗೊಂಡು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಹನಿ ನೀರಾವರಿ ಮೂಲಕ ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಭೀಕರ ಬರಗಾಲದ ಹಿನ್ನೆಲೆಯಲ್ಲಿ ದನಕರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಮುಂಜಾಗ್ರತೆ ಯಿಂದ ಮೇವಿನ ಬೆಳೆಗಳನ್ನು ಬೆಳೆದು ಸಂಗ್ರಹಿಸಿಟ್ಟುಕೊಳ್ಳಬೇಕು. ಅಲ್ಲದೆ ಅಣತಿ ಆಸ್ಪತ್ರೆಗೆ ವೈದ್ಯರನ್ನು ನೇಮಿಸಲಾಗಿದ್ದು, ಕೋಡಿಹಳ್ಳಿ ಗ್ರಾಮಕ್ಕೆ ಹೋಗುವ ಕೆರೆ ಹಿಂಭಾಗದ ರಸ್ತೆಗೆ ಕಾಯಕಲ್ಪ ನೀಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮುಖಂಡರಾದ ವೆಂಕಟೇಶ್, ಎ.ಬಿ.ಮಂಜುನಾಥ್, ವಳಗೆರಹಳ್ಳಿ ಮಂಜುನಾಥ್, ಶಿವೇಗೌಡ, ರಂಗೇಗೌಡ, ನಂದೀಶ್,ಪುರೋಹಿತ್ ದಿವಾಕರ್, ಪರಮೇಶ್ ಇತರರು ಇದ್ದರು.