ಹಾರನಹಳ್ಳಿ ಆಂಜನೇಯ ದೇವಾಲಯದ ಪುಷ್ಕರಣಿ ಸ್ವಚ್ಛತೆಯ ಕೊರತೆ ಎದುರಿಸುತ್ತಿರುವುದು.  
ಹಾಸನ

ಪುಷ್ಕರಣಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

Villagers demand cleaning of the temple tank

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರುನಲ್ಲಿರುವ ಪುರಾತನ ಪುಷ್ಕರಣಿಯ ನೀರನ್ನು ಹಿಂದೆ ಕುಡಿಯಲು ಹಾಗೂ ದೇವಾಲಯದ ಕಾರ್ಯಗಳಿಗೂ ಬಳಸುತ್ತಿದ್ದರು. ಆದರೇ, ಇಂದು ಪುಷ್ಕರಣಿಯ ನೀರು ಸ್ವಚ್ಛತೆಯ ಕೊರತೆಯಿಂದ ಹಸಿರು ಬಣ್ಣಕ್ಕೆ ತಿರುಗಿ, ತ್ಯಾಜ್ಯ ತುಂಬಿಕೊಂಡಿದೆ.

ತಡೆಗೋಡೆ ಇಲ್ಲದ ಕಾರಣ ಮಳೆ ನೀರಿನ ಜತೆ ಕಸ ನೇರವಾಗಿ ಸೇರುತ್ತಿದೆ. ಹನುಮ ಜಯಂತಿ ಸಮೀಪಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಬ್ಬದೊಳಗೆ ಪುಷ್ಕರಣಿ ಹೂಳೆತ್ತಿ ಸ್ವಚ್ಛಗೊಳಿಸಿ, ಸುತ್ತಲೂ ತಡೆಗೋಡೆ ಮತ್ತು ರಕ್ಷಣಾ ಬೇಲಿ ಹಾಕಬೇಕು ಎಂದು ಗ್ರಾಮಸ್ಥರು ಪತ್ರಿಕೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.