ಜಾಜೂರು ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ಜಯಂತ್ಯುತ್ಸವ ಅದ್ದೂರಿಯಾಗಿ ನೆರವೇರಿತು. ಶೇಖರಪ್ಪ, ರಮೇಶ್, ಶಶಿಧರ್ ಗಂಗಾಧರಪ್ಪ, ಮಲ್ಲಿಕಾರ್ಜುನ್, ಜಗದೀಶ್ ಸುಬ್ಬಣ್ಣ ಇತರರಿದ್ದರು. 
ಹಾಸನ

ಜಾಜೂರಲ್ಲಿ ವೀರಭದ್ರೇಶ್ವರ ಸ್ವಾಮಿ ಜಯಂತ್ಯುತ್ಸವ

ದೇವಾಲಯದಲ್ಲಿ ವಿಶೇಷ ಪೂಜೆ

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿಯ 8ನೇ ವರ್ಷದ ಜಯಂತ್ಯುತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ, ಗಣಪತಿ ಹೋಮ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಸೋಮವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿ ಒಳಗೊಂಡಂತೆ ಧೂತರಾಯ ಸ್ವಾಮಿ ದೇವರುಗಳ ಉತ್ಸವ ನೆರವೇರಿತು. ನಂತರ ಗ್ರಾಮದ ರಂಗನಾಥ ಸ್ವಾಮಿ ಹಾಗೂ ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿ ಮತ್ತು ಚಿಕ್ಕಮ್ಮ ದೇವಿಯರ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ,ಅಭಿಷೇಕ ನೆರವೇರಿಸಲಾಯಿತು.

ಗ್ರಾಮದ ಪ್ರಮುಖ ರಸ್ತೆಗಳನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಮುಖಂಡರಾದ ಗುಡಿಗೌಡ ಶೇಖರಪ್ಪ, ರಮೇಶ್, ಶಶಿಧರ್, ಗಂಗಾಧರಪ್ಪ, ಮಲ್ಲಿಕಾರ್ಜುನ್, ಜಗದೀಶ್ ಸುಬ್ಬಣ್ಣ ಇತರರಿದ್ದರು.

ಪೋಟೋ 02,