ಆಲೂರು ತಾಲೂಕು ಪಾಳ್ಯ ಹೋಬಳಿ ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಶಿಕ್ಷಕರಾದ ರಘು, ಯೋಗೇಶ್ ಇದ್ದರು. 
ಹಾಸನ

ಗಾಂಧೀಜಿ ಆದರ್ಶಗಳು ಇಂದಿಗೂ ಜೀವಂತ

ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆ

ಆಲೂರು: ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಿಕ್ಕಕಣಗಾಲು ಪ್ರೌಢಶಾಲೆ ಮುಖ್ಯ ಶಿಕ್ಷಕ ರಘು ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಭಾರತೀಯರು ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಬೇಕು. ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆ ತತ್ವಗಳು ಇನ್ನೂ ಶಾಶ್ವತವಾಗಿ ಉಳಿದಿವೆ. ಗಾಂಧೀಜಿ ಅವರು ಎಲ್ಲ ಭಾರತೀಯರ ಹೃದಯದಲ್ಲಿದ್ದಾರೆ ಎಂದರು.

ಶಿಕ್ಷಕ ಯೋಗೇಶ್ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರ ಎಂದು ತಿಳಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ, ಸದಸ್ಯರಾದ ಆನಂದ್, ನಿಂಗರಾಜು, ಶಿಕ್ಷಕರಾದ ಭಾವನಿ, ಸುಮಿತ್ರಾ, ಮಹೇರಾ ಬಾನು, ಪ್ರವೀಣ್ ಉಪಸ್ಥಿತರಿದ್ದರು.