ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆ ಬಿಂಬಿಸುವ ಬೀದಿನಾಟಕ ಪ್ರದರ್ಶನ ಗಮನ ಸೆಳೆಯಿತು. 'Namo Seva' Story Draws Attention
ಹಾಸನ

ಗಮನ ಸೆಳೆದ ನಮೋ ಸೇವಾ ಕಥನ

'Namo Seva' Story Draws Attention

ಬೇಲೂರು: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯನ್ನು ಬಿಂಬಿಸುವ ಹಾಗೂ ವಿಕಸಿತ ಭಾರತ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಬೇಲೂರು ಮಂಡಲದಿಂದ ನಮೋ ಸೇವಾ ಕಥನ ಶೀರ್ಷಿಕೆಯಡಿ ಬೀದಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ವೃತ್ತಿ ರಂಗ ತಂಡದ ಮುಖ್ಯಸ್ಥ ಗಣಪಗೌಡ ಅವರ ನೇತೃತ್ವದಲ್ಲಿ ನಡೆದ ಬೀದಿ ನಾಟಕದಲ್ಲಿ ಮೋದಿ ಅವರ ಜೀವನದ ಪ್ರಮುಖ ಘಟ್ಟಗಳು, ರಾಜಕೀಯ ಪಯಣ, ಅವರ ಸಾಧನೆ, ಜನ ಸೇವೆಯ ಕುರಿತಾದ ಪ್ರಸಂಗಗಳನ್ನು ಕಲಾವಿದರು ಅಭಿನಯದ ಮೂಲಕ ಪ್ರಸ್ತುತ ಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ್ ಕೌರಿ ಮಾತನಾಡಿ, ಯುವ ಜನರು ಹಾಗೂ ಸಾರ್ವಜನಿಕರು ಪ್ರಧಾನಿ ಅವರ ಜೀವನ ಮತ್ತು ದೇಶ ಸೇವೆಯನ್ನು ಅರಿಯುವಂತಾಗಬೇಕು ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್, ಬಿಜೆಪಿ ನಗರಾಧ್ಯಕ್ಷ ವಿನಯ್ ಕುಮಾರ್, ನಗರ ಕಾರ್ಯದರ್ಶಿ ರಾಘವೇಂದ್ರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ವೇತಾ, ಖಜಾಂಚಿ ಮೀನಾಕ್ಷಿ, ಯುವ ಮುಖಂಡ ಧನು ಇತರರಿದ್ದರು.