ಚನ್ನರಾಯಪಟ್ಟಣದಲ್ಲಿ ಆರಂಭವಾಗುತ್ತಿರುವ ಸ್ನೇಹಮಯಿ ವಿವೇಕಾನಂದ ಯೋಗಾಸನ ಚಾರಿಟಬಲ್ ಟ್ರಸ್ಟ್‌ನಿಂದ ಯೋಗ ತರಬೇತಿ ಕುರಿತು ಆಯೋಜಕರು ಸುದ್ದಿಗೋಷ್ಠಿ ನಡೆಸಿದರು.  
ಹಾಸನ

ಯೋಗ ತರಬೇತಿ ಕೇಂದ್ರ ಉದ್ಘಾಟನೆ ಏ.5ಕ್ಕೆ

ಚನ್ನರಾಯಪಟ್ಟಣ: ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ನೇಹಮಯಿ ವಿವೇಕಾನಂದ ಯೋಗಾಸನ ಚಾರಿಟಬಲ್ ಟ್ರಸ್ಟ್ ವತಿಯಿಂದ ಏ.5ರಂದು ಪಟ್ಟಣದ ಪತ್ರಕರ್ತರ ಭವನದ ಮೇಲ್ಮಹಡಿಯಲ್ಲಿ ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ವಿವೇಕಾನಂದ ಯೋಗ ಮಂದಿರದ ಆಯೋಜಕ ಮಂಜುನಾಥ್ ಕೆ.ಅಡಗೂರು ತಿಳಿಸಿದರು.
ಈಗಾಗಲೇ ನೋಂದಣಿ ಕಾರ್ಯ ಪ್ರಾರಂಭಗೊಂಡಿದ್ದು, ವಾರದಲ್ಲಿ 5 ದಿನ ಬೆಳಗ್ಗೆ ಹಾಗೂ ಸಂಜೆ 1 ಗಂಟೆ ಕಾಲ ಯೋಗ ತರಬೇತಿ ನೀಡಲಾಗುವುದು. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಅವಕಾಶವಿದೆ. ಉದ್ಘಾಟನಾ ಸಮಾರಂಭದಲ್ಲಿ ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಕೋಟೆ ಮೋಹನ್, ಸದಸ್ಯರಾದ ಟಿವಿಎಸ್ ಶಶಿಧರ್, ಗಣೇಶ್, ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಠೀಯ ಯೋಗ ತರಬೇತುದಾರ ಡಾ.ಕೆ.ಆರ್.ನವೀನ್ ಕುಮಾರ್, ಕಿಶೋರ್ ಬೆಳ್ಳೂರು, ರಾಜ್ಯ ಮಟ್ಟದ ಯೋಗಪಟು ವಿಸ್ಮಿತ ಶೆಟ್ಟಿಹಳ್ಳಿ, ಹಾಸನ ಹಸಿರು ಸೇನೆ ರೈತ ಸಂಘದ ಅಧ್ಯಕ್ಷೆ ಡಾ.ತಾರಾವತಿ ಇದ್ದರು.