ಚೆಕ್ ಡ್ಯಾಮ್ ನಿರ್ಮಾಣ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ, ಗಿರೀಶ್, ಚಂದ್ರಣ್ಣ, ಈಶಣ್ಣ, ಶಿವಲಿಂಗಪ್ಪ, ಕೇಶವಣ್ಣ, ರೇವಣ್ಣ, ರಾಜಶೇಖರ್ ರಾಜಶೇಖರ್, ಜ್ಞಾನೇಶ್ ಇತರರಿದ್ದರು. 
ಹಾಸನ

ಚೆಕ್ ಡ್ಯಾಂಗಳಿಂದ ರೈತರಿಗೆ ಅನುಕೂಲ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ
ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಸಬಾ ಹೋಬಳಿಯ ತಿರುಪತಿ ಸಮೀಪ ಸಣ್ಣ ನೀರಾವರಿ ಇಲಾಖೆಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 2 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಶನಿವಾರ ಚಾಲನೆ ನೀಡಿದರು.
ನಾನು ಶಾಸಕನಾಗುವುದಕ್ಕಿಂತ ಮೊದಲು ಅರಸೀಕೆರೆ ಕ್ಷೇತ್ರ ಬರಪೀಡಿತ ಪ್ರದೇಶವಾಗಿತ್ತು. ಅಂತರ್ಜಲ ಮಟ್ಟ ಸಾವಿರಾರು ಅಡಿಗೆ ಇಳಿದಿತ್ತು. ಇದನ್ನು ಮನಗಂಡು ಸದನದಲ್ಲಿ ಹೋರಾಟ ಮಾಡಿ ಅಂತರ್ಜಲ ಅಭಿವೃದ್ಧಿ ಆಗಬೇಕಾದರೆ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕೆಂದು ಸರ್ಕಾರಗಳಿಗೆ ಒತ್ತಾಯ ಮಾಡಿ ಅನುದಾನ ತರಲಾಯಿತು. ಅದರ ಪರಿಣಾಮ ನಮ್ಮ ಕ್ಷೇತ್ರದಲ್ಲಿ ನೂರಾರು ಚೆಕ್ ಡ್ಯಾಂಗಳು ನಿರ್ಮಾಣವಾಗಿದೆ. ಇಂದು ನಾವು ಅಂತರ್ಜಲ ಶೇಖರಣೆಯಲ್ಲಿ ಮುಂದಿದ್ದೇವೆ. ಇಂದು ಕೇವಲ 200 ರಿಂದ 300 ಅಡಿಗಳಲ್ಲಿ ನೀರು ದೊರೆಯುತ್ತಿದೆ. ಇದರಿಂದ ರೈತರುಗಳಿಗೆ ಅನುಕೂಲವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಅಗ್ಗುಂದ ಗ್ರಾಪಂ ಮಾಜಿ ಅಧ್ಯಕ್ಷರಾದ ತಿರುಪತಿ ಗಿರೀಶ, ಮುಖಂಡರಾದ ತಿರುಪತಿ ಚಂದ್ರಣ್ಣ, ರಂಗಸ್ವಾಮಿ, ಕಾರೆಹಳ್ಳಿ ಈಶಣ್ಣ, ಬೊಮ್ಮೇನಹಳ್ಳಿ ವಡ್ಡರಹಟ್ಟಿ ರೇವಣ್ಣ, ಗೊಲ್ಲರಹಟ್ಟಿ ರಾಜಶೇಖರ, ಬೋರನಕೊಪ್ಪಲು ಶಿವಲಿಂಗಪ್ಪ, ಯಳವಾರೆ ಕೇಶವಣ್ಣ, ಇಂಜಿನಿಯರ್ ಉಮೇಶ, ಗುತ್ತಿಗೆದಾರ ಜ್ಞಾನೇಶ ಇತರರಿದ್ದರು.