ಅರಸೀಕೆರೆ ತಾಲೂಕಿನ ಬಿಸಿಲೇಹಳ್ಳಿ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಚಾಲನೆ ನೀಡಿದರು. ವಿಶ್ವಣ್ಣ, ಶಿವಪ್ಪ, ಜ್ಞಾನೇಶ್ ಇತರರು ಇದ್ದರು. 
ಹಾಸನ

ಅಂತಿಮ ಹಂತಕ್ಕೆ ಎತ್ತಿನಹೊಳೆ ಯೋಜನೆ

ಶಿವಶಂಕರ್ ಎಂ. ಹೆಬ್ಬಳ್ಳ
ಅರಸೀಕೆರೆ ಗ್ರಾಮಾಂತರ : ತಾಲೂಕಿನ ಗಂಡಸಿ ಹೋಬಳಿಯ ಬಿಸಿಲೆಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ವೆಚ್ಚದ ಸಿಸಿ ರಸ್ತೆಯ ನಿರ್ಮಾಣ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕು ಬಯಲು ಸೀಮೆಯಾಗಿದ್ದು, ನೀರಾವರಿ ವಂಚಿತವಾಗಿದೆ. ನಾನು ಶಾಸಕನಾದ ಮೇಲೆ ಮಾಡಿದ ಹೋರಾಟದ ಫಲದಿಂದ ಇಂದು ಕುಡಿಯುವ ನೀರಿಗಾಗಿ ಎತ್ತಿನಹೊಳೆ ಕಾಮಗಾರಿ ಕಾರ್ಯರೂಪಕ್ಕೆ ಬಂದಿದೆ. ಕಾಮಗಾರಿ ಅಂತಿಮ ಹಂತ ತಲುಪಿದ್ದು, ಕೆಲವೇ ದಿನಗಳಲ್ಲಿ ಚಾನಲ್ ಮೂಲಕ ನೀರು ಹರಿಯಲಿದೆ ಎಂದರು.
ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿವರೆಗೂ ನಾನು ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇನೆ. ಟೀಕೆ ಮಾಡುವವರಿಗೆ ನನ್ನ ಕೆಲಸಗಳ ಮೂಲಕ ಉತ್ತರಿಸುವೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಮುದುಡಿ ವಿಶ್ವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಪ್ಪ, ಗುತ್ತಿಗೆದಾರ ಜ್ಞಾನೇಶ್, ಎಇಇ ಇಂದ್ರ ಕುಮಾರ್, ಶಂಭುಲಿಂಗೇಗೌಡ, ನಂದನ್, ಚಂದ್ರಶೇಖರ್, ವೆಂಕಟೇಶ್, ಪ್ರಕಾಶ್, ಅಭಿ, ಚಂದ್ರು, ಕೃಷ್ಣನಾಯಕ, ಶಿವಣ್ಣ, ಕುಮಾರ, ಜಯಣ್ಣ, ರಮೇಶ ಇತರರು ಇದ್ದರು.