ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಬುಧವಾರ ನಗರಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
- ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಪೂಜೆ
- ಪ್ರಚಾರದ ರಥ
ಹಾಸನ: ಜನವರಿ 15ರಿಂದ 20ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಬುಧವಾರ ನಗರಕ್ಕೆ ಆಗಮಿಸಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
ಮೊದಲು ತಣ್ಣೀರುಹಳ್ಳ ಮಠ, ಶ್ರೀ ಬಸವೇಶ್ವವರ ಕಲ್ಯಾಣ ಮಂಟಪ ಹಾಗೂ ಶ್ರೀ ಜವೇನಹಳ್ಳಿ ಮಠಕ್ಕೆ ರಥ ಬಂದಾಗ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಇದ್ದರು.
ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ ಹಾಗೂ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಿರಣ್ ಕುಮಾರ್ ಹೊಸಮನಿ, ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪಾಲಾಕ್ಷ, ಧನಲಕ್ಷ್ಮೀ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಮಂಜುನಾಥ್, ಶಿವಪ್ಪ, ಲಿಂಗರಾಜು, ರೇಣುಕಾ ಇದ್ದರು.