ವಿಶ್ವ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಡಾ.ಮಹೇಶ್ ಉದ್ಘಾಟಿಸಿದರು. ಡಾ.ಜಗದೀಶ್, ಡಾ. ಕಾಂತರಾಜ್, ಮುಖ್ಯಶಿಕ್ಷಕಿ ಜ್ಞಾನೇಶ್ವರಿ ಇತರರು ಇದ್ದರು.  
ಹಾಸನ

ವಿಶ್ವ ತೋಟಗಾರಿಕೆ ದಿನಾಚರಣೆ

ಪ್ರಜ್ವಲ್.ಎನ್

ಅರಸೀಕೆರೆ ಗ್ರಾಮಾಂತರ:

ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಶಾಲೆಯಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಸಹಯೋಗದೊಂದಿಗೆ ರಾಷ್ಟ್ರೀಯ ತೋಟಗಾರಿಕಾ ದಿನವನ್ನು ಬುಧವಾರ ಆಚರಿಸಲಾಯಿತು.

ಡಾ. ಮಹೇಶ್ ಮಾತನಾಡಿ, ಎಚ್.ಎಚ್.ಮರಿಗೌಡರ ಜನ್ಮದಿನವನ್ನು ರಾಷ್ಟ್ರೀಯ ತೋಟಗಾರಿಕಾ ದಿನವನ್ನಾಗಿ ಆಚರಿಸುತ್ತಿರುವುದರ ಮಹತ್ವ ಮತ್ತು ಹಿನ್ನೆಲೆಯನ್ನು ವಿಸ್ತಾರವಾಗಿ ತಿಳಿಸಿದರು.

ಡಾ.ಜಗದೀಶ್ ಅವರು ಕೃಷಿ ಮತ್ತು ತೋಟಗಾರಿಕೆ ಬಗೆಗಿನ ವ್ಯತ್ಯಾಸ ಮತ್ತು ಕಾರ್ಯಕ್ಷೇತ್ರದ ಕುರಿತು ಮಾಹಿತಿ ನೀಡಿದರು. ಡಾ.ಪ್ರಶಾಂತ್ ಅವರು ಕೀಟ ಶಾಸ್ತ್ರ, ತರಕಾರಿ ಮತ್ತು ಹಣ್ಣುಗಳ ಬಳಕೆಯ ವೈಖರಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ನಂತರ ಡಾ. ಕಾಂತರಾಜು ಅವರು ತೋಟಗಾರಿಕೆ ಬೆಳೆಗಳ ಮಹತ್ವ, ನಾವು ಆಹಾರವಾಗಿ ಬಳಸುವ ಪ್ರತಿಯೊಂದು ಸೊಪ್ಪು, ತರಕಾರಿ, ಹಣ್ಣು, ಶಕ್ತಿ ವರ್ಧಕ ಮತ್ತು ಆರೋಗ್ಯವರ್ಧಕವಾಗಿ ಮಾರ್ಪಡುವುದರ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.

ಜ್ಞಾನೇಶ್ವರಿ ಅವರು ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ವಿಸ್ತಾರ, ಅದರ ಕಾರ್ಯವೈಖರಿ, ಬಳಸುವ ಆಹಾರ ಆರೋಗ್ಯದಾಯಕ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರು.